ದ.ಕ.ಜಿಲ್ಲೆ: ಇಬ್ಬರಲ್ಲಿ ಕೋವಿಡ್ ಪಾಸಿಟಿವ್
ಫೈಲ್ ಫೋಟೊ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಗುರುವಾರ ಇಬ್ಬರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಇದರೊಂದಿಗೆ ಒಟ್ಟು ಮೂರು ಮಂದಿಯಲ್ಲಿ ಕೊರೋನ ಕಾಣಿಸಿದಂತಾಗಿದೆ.
ಗುರುವಾರ ನಡೆಸಿದ ಕೊರೋನ ಪರೀಕ್ಷೆಯಲ್ಲಿ ಇಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ವಲಸೆ ಕಾರ್ಮಿಕರೊಬ್ಬರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಇನ್ನೊಂದು ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸುಳ್ಯ ಮೂಲದ 83 ವರ್ಷದ ವೃದ್ಧೆಯಲ್ಲಿ ಕೊರೋನ ಕಾಣಿಸಿದೆ.
ಕೊರೋನ ಪರೀಕ್ಷೆ ಆರಂಭಿಸಿದ ಮೊದಲ ದಿನವೇ ಬುಧವಾರ ಮಂಗಳೂರಿನಲ್ಲಿ ಉಡುಪಿ ಮೂಲದ ವೃದ್ಧರೊಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿತ್ತು. ನರ ಸಂಬಂಧ ಚಿಕಿತ್ಸೆಗೆ ಇವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಟೆಸ್ಟ್ ಮಾಡಿಸಿದಾಗ ಅದರಲ್ಲಿ ಪಾಸಿಟಿವ್ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಪಾಸಿಟಿವ್ ಪತ್ತೆಯಾದವರಿಗೆ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಅವರು ಆರೋಗ್ಯವಂತರಾಗಿದ್ದಾರೆ. ಕೋವಿಡ್ ನಿಯಮ ಪಾಲಿಸಿಕೊಂಡು ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.