ಮಂಗಳೂರು: ಡಾ. ಹಾರೂನ್ ರಿಗೆ ಪ್ರತಿಷ್ಠಿತ FGSI ಫೆಲೋಶಿಪ್
ಮಂಗಳೂರು: ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಆಂತರಿಕ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕರಾದ ಡಾ. ಹಾರೂನ್ ಎಚ್ ಅವರಿಗೆ ಕೊಚ್ಚಿಯಲ್ಲಿ ನಡೆದ ʼಜೇರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾʼ (FGSI)ದ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ʼಜೇರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾʼದ ಪ್ರತಿಷ್ಠಿತ ಫೆಲೋಶಿಪ್ ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಸೊಸೈಟಿಯ ಮುಖ್ಯ ಪೋಷಕರಾದ ಡಾ. ವಿ.ಕೆ. ಅರೋರಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಡಾ. ಒ.ಪಿ. ಶರ್ಮಾ ಮತ್ತು ಅಧ್ಯಕ್ಷರಾದ ಡಾ. ಸಜೇಶ್ ಅಶೋಕನ್ ಉಪಸ್ಥಿತರಿದ್ದರು.
ಜೇರಿಯಾಟ್ರಿಕ್ ಸೊಸೈಟಿ:-
ಜೇರಿಯಾಟ್ರಿಕ್ ಸೊಸೈಟಿಯು ಹಿರಿಯ ನಾಗರಿಕರ ಆರೋಗ್ಯ ಹಾಗೂ ಕಲ್ಯಾಣದ ಬಗ್ಗೆ ಗಮನಹರಿಸುತ್ತದೆ. ಇದು ವಯೋಮಾನಕ್ಕೆ ಸಂಬಂಧಿಸಿದ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಸಮಸ್ಯೆಗಳ ನಿರ್ವಹಣೆ, ದೀರ್ಘಕಾಲದ ರೋಗ ನಿರ್ವಹಣೆ, ಗುಣಮಟ್ಟದ ಜೀವನವನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ.
ಜೇರಿಯಾಟ್ರಿಕ್ ಸೊಸೈಟಿ ಇಂಡಿಯಾ:-
ಜೇರಿಯಾಟ್ರಿಕ್ ಸೊಸೈಟಿ ಇಂಡಿಯಾ (GSI) ಹಿರಿಯ ನಾಗರಿಕರ ಆರೈಕೆ, ಶಿಕ್ಷಣ, ಮತ್ತು ಸಂಶೋಧನೆಗೆ ಮುಂಚೂಣಿಯಲ್ಲಿರುವ ಪ್ರಮುಖ ಸಂಸ್ಥೆಯಾಗಿದೆ. ಅದು ಹಿರಿಯ ನಾಗರಿಕರ ಆರೋಗ್ಯ ಗುಣ ಮಟ್ಟವನ್ನು ಸುಧಾರಿಸುವಲ್ಲಿ ತರಬೇತಿ ಮತ್ತು ಸಹಕಾರವನ್ನು ಒದಗಿಸುತ್ತದೆ.