ಮಾಜಿ ಸಚಿವ ಬಿ ಎ ಮೊಯ್ದೀನ್ ಅಳಿಯ ನವಾಝ್ ನಿಧನ
ಮಂಗಳೂರು: ಮಾಜಿ ಸಚಿವ ಮರ್ಹೂಂ ಬಿ ಎ ಮೊಯ್ದಿನ್ ಅವರ ಅಳಿಯ ( ಎರಡನೇ ಮಗಳ ಗಂಡ) ನವಾಝ್ ಗುರುಪುರ (62) ಹೃದಯಾಘಾತದಿಂದ ಇಂದು ಬೆಳಿಗ್ಗೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಎರಡು ವಾರಗಳ ಹಿಂದೆ ಬೈಪಾಸ್ ಸರ್ಜರಿಗೆ ಒಳಗಾಗಿದ್ದ ಅವರು, ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿರುವ ಪ್ಲಾಮಾ ಹೈಟ್ಸ್ ನಲ್ಲಿರುವ ತಮ್ಮ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು.
ಮೃತರು ಪತ್ನಿ ಮತ್ತು ಮೂವರು ಮಕ್ಕಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತದೇಹವನ್ನು ಮಂಗಳೂರಿನ ಸುರತ್ಕಲ್ ಸಮೀಪದ ಕೃಷ್ಣಾಪುರ ಚೊಕ್ಕಬೆಟ್ಟುವಿನ ಅವರ ಮನೆಗೆ ತರಲಾಗುತ್ತಿದ್ದು, ಸೋಮವಾರ ಮಗ್ರಿಬ್ ನಮಾಝ್ ನ ಬಳಿಕ ಚೊಕ್ಕಬೆಟ್ಟು ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story