ದ.ಕ: ಕಳೆದ 24 ಗಂಟೆಯಲ್ಲಿ ಪಜೀರು ಗ್ರಾಮದಲ್ಲಿ ಅತ್ಯಧಿಕ ಮಳೆ ದಾಖಲೆ!
ಸಾಂದರ್ಭಿಕ ಚಿತ್ರ
ಮಂಗಳೂರು, ಜು.4: ಕರಾವಳಿಯಲ್ಲಿ ರವಿವಾರ ತಡರಾತ್ರಿಯಿಂದ ಮುಂಗಾರು ಚುರುಕುಗೊಂಡಿದ್ದು, ಸೋಮವಾರ ದ.ಕ. ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿದಿದೆ. ಕರ್ನಾಟಕ ರಾಜ್ಯ ಪ್ರಾಕೃತಿಕ ವಿಪತ್ತು ನಿಗಾ ಕೇಂದ್ರದ ಮಾಹಿತಿ ಪ್ರಕಾರ, ಮಂಗಳವಾರ ಬೆಳಗ್ಗೆ 8 ಗಂಟೆಯವರೆಗೆ ಕಳೆದ 24 ಗಂಟೆಯಲ್ಲಿ ದ.ಕ. ಜಿಲ್ಲೆಯ ಬಂಟ್ವಾಳದ ಪಜೀರು ಗ್ರಾಮದಲ್ಲಿ 172.5 ಮಿ.ಮೀ. ಮಳೆಯೊಂದಿಗೆ ಅತ್ಯಧಿಕ ಮಳೆ ದಾಖಲಾಗಿದೆ.
ಈ ಅವಧಿಯಲ್ಲಿ ಮಂಗಳೂರಿನ ಮುನ್ನೂರಿನಲ್ಲಿ 155 ಮಿ.ಮೀ., ಕೋಟೆಕಾರ್ನಲ್ಲಿ 154 ಮಿ.ಮೀ., ಕಿನ್ಯದಲ್ಲಿ 135 ಮಿ.ಮೀ., ಪಾಂಡೇಶ್ವರ ಅಗ್ನಿಶಾಮಕ ದಳದ ಕಚೇರಿ ಬಳಿ 132.5 ಮಿ.ಮೀ., ಬಾಳ ಬಳಿ 122.5 ಮಿ.ಮೀ. ಮಳೆ ದಾಖಲಾಗಿದೆ.
ಉತ್ತರ ಕನ್ನಡದ ಅಂಕೋಲಾ ಭಾವಿಕೇರಿಯಲ್ಲಿ 148.5 ಮಿ.ಮೀ., ಹೊನ್ನಾವರ ಕಾಡತೋಕ ದಲ್ಲಿ 143 ಮಿ.ಮೀ., ಕುಮಟಾ ದೇವಗಿರಿ ಹಾಗೂ ಭಟ್ಕಳದ ಮುಂಡಳ್ಳಿಯಲ್ಲಿ ತಲಾ 142.5 ಮಿ.ಮೀ., ಕುಮಟಾ ಹೆಗ್ಡೆಯಲ್ಲಿ 141.5 ಮಿ.ಮೀ., ಭಟ್ಕಳ ಮಾವಿನಕುರ್ವೆಯಲ್ಲಿ 139.5 ಮಿ.ಮೀ. ಹಾಗೂ ಉಡುಪಿ ಕುಂದಾಪುರದ ಯಡ್ತರೆಯಲ್ಲಿ 139.5 ಮಿ.ಮೀ., ಕುಂದಾಪುರ ಶಿರೂರಿನಲ್ಲಿ 136.5 ಮಿ.ಮೀ. ಮಳೆ ದಾಖಲಾಗಿದೆ.