ಫೆಂಗಲ್ ಚಂಡಮಾರುತದ ಪರಿಣಾಮ: ಮಂಗಳೂರಿನಲ್ಲಿ ಮುಂದುವರಿದ ಮಳೆಯ ಅಬ್ಬರ
ಮಂಗಳೂರು: ಫೆಂಗಲ್ ಚಂಡಮಾರುತದ ಪರಿಣಾಮ ಮಳೆ ತನ್ನ ಆರ್ಭಟವನ್ನು ತೀವ್ರಗೊಳಿಸಿದ್ದು, ಸೋಮವಾರ ರಾತ್ರಿ ಸತತವಾಗಿ ಸುರಿಯಲಾರಂಭಿಸಿದ ಮಳೆ ಇದೀಗಲೂ ಮುಂದುವರಿದಿದೆ.
ಹವಾಮಾನ ಇಲಾಖೆಯು ಮಳೆ ಮುಂದುವರಿಯುವ ಮುನ್ಸೂಚನೆ ನೀಡಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನಗರದ ಕೆಲವು ಕಡೆ ಮಳೆನೀರು ಮನೆಯೊಳಗೆ ಹರಿದ ಬಗ್ಗೆ ವರದಿಯಾಗಿದೆ.
ಮಳೆಯಿಂದಾಗಿ ಇಂದು ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಹಲವು ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.
ನಗರದ ಕೊಟ್ಟಾರ ಚೌಕಿ, ಪಂಪ್‌ವೆಲ್, ತೊಕ್ಕೊಟ್ಟು ಮತ್ತಿತರ ಕಡೆ ನೀರು ತುಂಬಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಮಂಗಳೂರಿನ ಕರಂಗಲ್ಪಾಡಿಯಲ್ಲಿ ಕಾಂಪೌಂಡ್ ಕುಸಿದು ಮಳೆನೀರು ಮನೆಯೊಂದರ ಒಳಗೆ ನುಗ್ಗಿ ಆತಂಕ ಸೃಷ್ಟಿಸಿದೆ.
ಮಂಗಳೂರು ಜೆಪ್ಪು ವಾರ್ಡ್ ನ ಎಂ.ಆರ್. ಭಟ್ ಲೇನ್ ನ ಸುರಕ್ಷಾ ಹಾಸ್ಟೆಲ್ ಬಳಿ ಇರುವ ಅಬ್ದುಲ್ ರಹ್ಮಾನ್ ಎಂಬವರ ಮನೆಯ ಆವರಣ ಗೋಡೆ ಕುಸಿದಿದೆ. ಇದರಿಂದ ಮನೆಗೂ ಹಾನಿಯಾಗುವ ಭೀತಿ ಎದುರಾಗಿದೆ.
Next Story