ಮೀಫ್ ಮಂಗಳೂರು ವಲಯ ಮೊಂಟೆಸ್ಸರಿ ಶಿಕ್ಷಕರ 2 ದಿನಗಳ ಕಾರ್ಯಾಗಾರ ಉದ್ಘಾಟನೆ
ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ವತಿಯಿಂದ 2 ದಿನಗಳ ಪ್ರಿಕೆಜಿ, ಎಲ್ ಕೆ ಜಿ, ಯುಕೆಜಿ ಶಿಕ್ಷಕರ ಕಾರ್ಯಾಗಾರ ಮಂಗಳೂರು ಜೆಪ್ಪಿನ ಮೊಗರು ಯೆನೆಪೋಯ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
ಯೆನೆಪೋಯ ಮೆಡಿಕಲ್ ಕಾಲೇಜಿನ ಮಕ್ಕಳ ಮನೋತಜ್ಞೆ ರೀಟಾ ಆರ್ ಉದ್ಘಾಟಿಸಿ, ಆಧುನಿಕ ಕಾಲದಲ್ಲಿ ಶಿಕ್ಷಕರನ್ನು ತರಬೇತಿ ಮೂಲಕ ಕಾರ್ಯಕ್ಷಮತೆ ಹೆಚ್ಚಿಸುವ ಮೀಫ್ ಯೋಜನೆ ಶ್ಲಾಘನಾರ್ಹ ಎಂದರು.
ಯೆನೆಪೋಯ ಅಕ್ಷರ ಹೌಸ್ ಆಫ್ ಚಿಲ್ಡ್ರನ್ಸ್ ತರಬೇತಿ ಸಂಸ್ಥೆ ಪ್ರಾತ್ಯ ಕ್ಷಿಕೆ ಯೊಂದಿಗೆ ಸಣ್ಣ ಮಕ್ಕಳ ಪಠ್ಯ ಚಟುವಟಿಕೆ, ಮನೋ ವಿಜ್ಞಾನ, ವ್ಯಕ್ತಿತ್ವ ವಿಕಸನ, ಮೊದಲಾದ ವಿಷಯ ದಲ್ಲಿ ತರಬೇತಿ ನೀಡಲಾಯಿತು ವಾರ್ಷಿಕ ಕ್ರಿಯಾ ಯೋಜನೆ ಬಿಡುಗಡೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರುಗಳಿಗೆ ಮತ್ತು ಶಾಲಾ ಆಡಳಿತ ಮಂಡಳಿಯವರಿಗೆ ವಿವಿದ ವಾರ್ಷಿಕ ಕಾರ್ಯಕ್ರಮಗಳನ್ನು ಮೀಫ್ ವತಿಯಿಂದ ಆಯೋಜಿಸಲಾಗಿದ್ದು, ಪ್ರಸಕ್ತ ವರ್ಷದ ಕ್ರಿಯಾಯೋಜನೆ ಯ ಕೈಪಿಡಿಯನ್ನು ಯೆನೆಪೋಯ ಸಮೂಹ ಸಂಸ್ಥೆಗಳ ನಿರ್ದೇಶಕ ಜಾವೆದ್ ಮಹಮ್ಮದ್ ಕುಂಞಿ ಬಿಡುಗಡೆಗೊಳಿಸಿದರು.
ಮೊಂಟೆಸ್ಸರಿ ನರ್ಸರಿ ಶಿಕ್ಷಕರ ತರಬೇತಿ ಕಾರ್ಯಾಗಾರ, ಐಎಎಸ್, ಐಪಿಎಸ್, ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರೇರಣಾ ಶಿಬಿರ, ಅಗ್ನಿ ಸುರಕ್ಷತಾ ತರಬೇತಿ, ಎಸ್. ಎಸ್. ಎಲ್. ಸಿ ಶಿಕ್ಷಕರುಗಳಿಗೆ ವಿಶೇಷ ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯವಾರು ತರಬೇತಿ, ಜಿಲ್ಲಾ ಮಟ್ಟದ ಅಂತರ್ ಶಾಲಾ ಕ್ರೀಡಾಕೂಟ, ಟ್ಯಾಲೆಂಟ್ ಹಂಟ್ ಆವಿಷ್ಕಾರ ಸ್ಪರ್ಧೆ, ಎಸ್.ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಪರಿಣತಿರಿಂದ ವಿಶೇಷ ಕಾರ್ಯಾಗಾರ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಾರಾoತ್ಯ ತರಗತಿಗಳು, ಬೆಂಗಳೂರು, ಮಂಗಳೂರು ಪ್ರತಿಷ್ಠಿತ ಪಿ. ಯು. ಮತ್ತು ತಾಂತ್ರಿಕ ಕಾಲೇಜುಗಳಲ್ಲಿ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಸೀಟ್ ಗಳ ಸಂಯೋಜನೆ, ಸ್ಪೋಕನ್ ಇಂಗ್ಲಿಷ್ ಕೋರ್ಸ್, ಮೊದಲಾದ ಕಾರ್ಯ ಯೋಜನೆಗಳನ್ನು ನಿಶ್ಚಿತ ಸಮಯದ ಪರಿಮಿತಿಯೊಳಗೆ ನಡೆಸುವ ಈ ಕಾರ್ಯಕ್ರಮಗಳಿಗೆ ಇಂದು ಯೆನೆಪೋಯ ಪದವಿ ಪೂರ್ವ ಕಾಲೇಜಿನಲ್ಲಿ ಬಿಡುಗಡೆ ಗೊಳಿಸಲಾಯಿತು.
ಸಭಾಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ ವಹಿಸಿದ್ದರು. ಉಪಾಧ್ಯಕ್ಷ ಮಾಮ್ತಾಜ್ ಅಲಿ ಕೃಷ್ಣಾಪುರ ಪ್ರಾಸ್ತಾವಿಕಗೈದರು.
ವೇದಿಕೆಯಲ್ಲಿ ಯೆನೆಪೋಯ ಸಮೂಹ ಸಂಸ್ಥೆಯ ನಿರ್ದೇಶಕಿ ಮಿಸ್ರಿಯಾ ಜಾವೆದ್, ಮೀಫ್ ಉಪಾಧ್ಯಕ್ಷ ಮುಸ್ತಫಾ ಸುಳ್ಯ, ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಟ್ಯಾಲೆಂಟ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅನ್ವರ್ ಹುಸೈನ್, ಶಾರಿಕ್, ಅಬ್ದುಲ್ ರಝಾಕ್, ಸಂಶುದ್ದೀನ್, ರಹ್ಮಾತುಲ್ಲಾ ಬುರೂಜ್, ಅಡ್ವೋಕೇಟ್ ಫಾರೂಕ್, ಹೈದರ್ ಅನುಗ್ರಹ, ಅಬ್ದುಲ್ ರಹಿಮಾನ್, ಇಕ್ಬಾಲ್, ಪರ್ವೇಝ್, ಮೊದಲಾವರು ಉಪಸ್ಥಿತರಿದ್ದರು.
ಪ್ರಾoಶುಪಾಲರಾದ ಉಜ್ವಾಲ್ ಮೆನ್ಜಸ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಯೆನೆಪೋಯ ಶಾಲೆಯ ಶಿಕ್ಷಕಿ ಅಂಕಿತ ಅವರು ನಿರೂಪಿಸಿದರು. ಇವ್ಲೆಟ್ ಪಿರೇರಾ ವಂದಿಸಿದರು. 56 ವಿದ್ಯಾಸಂಸ್ಥೆಗಳಿಂದ 211 ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಾಗಾರದ ಪ್ರಾಯೋಜತ್ವವನ್ನು ಯೆನೆಪೋಯ ಸಮೂಹ ಸಂಸ್ಥೆ ವಹಿಸಿದ್ದರು.