ಕಲ್ಲಾಪು: ಎ.30 ರಂದು ಸುಪರ್ ಚಿನ್ನಾಭರಣ ಮಳಿಗೆ ಉದ್ಘಾಟನೆ
ಉಳ್ಳಾಲ: ತಾಲೂಕು ವ್ಯಾಪ್ತಿಯ ಕಲ್ಲಾಪು ಹೃದಯ ಭಾಗದಲ್ಲಿ ನಿರ್ಮಾಣಗೊಂಡ ನೂತನ ಚಿನ್ನಾಭರಣ ಮಳಿಗೆಯೊಂದು ಎಪ್ರಿಲ್ 30 ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಶಾಸಕ ಹಾಗೂ ವಿಧಾನಸಭಾ ಸ್ಪೀಕರ್ ಆಗಿರುವ ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ ಎಂದು ಸುಪರ್ ಗೋಲ್ಡ್ ಚೆಯರ್ ಮ್ಯಾನ್ ಟಿ.ಎಂ. ಬಾವಾ ಹೇಳಿದರು.
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಸೆಬಾಸ್ಟಿಯನ್ ಚರ್ಚ್ ಧರ್ಮಗುರು ಸಿಪ್ರಿಯನ್ ಡಿ ಸೋಜ, ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಎಸಿಪಿ ಧನ್ಯ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಉದ್ಯಮದಲ್ಲಿ 45 ವರ್ಷಗಳ ಅನುಭವ ಹೊಂದಿರುವ ಯುನಿಟಿ ಹಾಲ್ ಮತ್ತು ಸುಪರ್ ಗ್ರೂಪ್ ಇವುಗಳ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಮಳಿಗೆಯಲ್ಲಿ ಮದುವೆ ಇನ್ನಿತರ ಸಮಾರಂಭಗಳಿಗೆ ಬಳಕೆಗೆ ಯೋಗ್ಯ ವಾದ ನವೀನ ಮಾದರಿಯ ಚಿನ್ನ ಮತ್ತು ವಜ್ರದ ಆಭರಣಗಳು ಲಭ್ಯವಿದೆ.
1985 ರಲ್ಲಿ ಐದು ಜನರ ಪಾಲುದಾರಿಕೆಯಲ್ಲಿ ಸುಪರ್ ಬಜಾರ್ ಆರಂಭಿಸಲಾಯಿತು.15 ವರ್ಷಗಳ ಬಳಿಕ ಫರಂಗಿಪೇಟೆ, ಕೈಕಂಬ ದಲ್ಲಿ ಸುಪರ್ ಬಝಾರ್ ಆರಂಭಿಸುವ ಮೂಲಕ ಶುರು ಮಾಡಿದ ಉದ್ಯಮ ಯಶಸ್ವಿ ಕಂಡು ಈಗ 25 ಸಂಸ್ಥೆ ರಚನೆ ಆಗಿದೆ ಎಂದು ಹೇಳಿದರು.
2016 ರಲ್ಲಿ ಚಿನ್ನ ದ ಮಳಿಗೆ ಆಂಭಿಸಿ ತಯಾರಿ ವೆಚ್ಚ ಕಡಿಮೆ ಮಾಡಿ ಗ್ರಾಹಕರಿಗೆ ನೀಡುವ ಮೂಲಕ ಯಶಸ್ಸು ಕಂಡಿದ್ದೇವೆ. ಇದೀಗ ಕಲ್ಲಾಪು ಬಳಿ ನಿರ್ಮಾಣಗೊಂಡ ಸ್ವಂತ ಕಟ್ಟಡದಲ್ಲಿ ಚಿನ್ನದ ಮಳಿಗೆ ಆರಂಭಿಸಿದ್ದೇವೆ. ಈ ಕಟ್ಟಡದಲ್ಲಿ ಚಿನ್ನಾಭರಣ ವೀಕ್ಷಣೆಗೆ ಹಾಗೂ ವಾಹನ ನಿಲುಗಡೆಗೆ ವಿಶಾಲವಾದ ಸ್ಥಳಾವಕಾಶ ಇದೆ . ಚಿನ್ನ ಮತ್ತು ವಜ್ರದ ಆಭರಣಗಳ ವೀಕ್ಷಣೆ ಹಾಗೂ ಖರೀದಿಗೆ ಪ್ರತ್ಯೇಕ ವ್ಯವಸ್ಥೆ ಕೂಡ ಲಭಿಸಲಿದೆ. ವಧುವಿನ ವಿವಾಹ ಕಾರ್ಯಕ್ರಮ ಕ್ಕೆ ಆಕರ್ಷಣೆಯ ವಿವಿಧ ವಿನ್ಯಾಸಗಳ ಆಭರಣಗಳು ಯೋಗ್ಯ ದರದಲ್ಲಿ ಲಭಿಸುವ ಜೊತೆಗೆ ಗ್ರಾಹಕರಿಗೆ ಪ್ರತಿ ಗಂಟೆಗೊಮ್ಮೆ ಡ್ರಾ ಕೂಡ ನಡೆಯಲಿದೆ. ಇದರಲ್ಲಿ ವಿಜೇತರಾದವರಿಗೆ ಚಿನ್ನದ ನಾಣ್ಯ ಲಭಿಸಲಿದೆ. ಒಂದೇ ಬಾರಿ ಖರೀದಿಸಲು ಕಷ್ಟವಾಗುವ ಗ್ರಾಹಕರಿಗೆ ಸ್ಕೀಂ ನ ಮೂಲಕ ಮಾಸಿಕ ಕಂತು ಪಾವತಿ ಮಾಡಿ ಚಿನ್ನಾಭರಣ ಖರೀದಿಸಲು ಅವಕಾಶ ಇದೆ. ಈ ರೀತಿ ಖರೀದಿ ಮಾಡುವವರಿಗೂ ಸಂಸ್ಥೆ ವತಿಯಿಂದ ರಿಯಾಯಿತಿ ಕೊಡುಗೆಗಳು ಕೂಡಾ ಲಭಿಸಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾರ್ಕೆಟಿಂಗ್ ಮೆನೇಜರ್ ಖಲಂದರ್, ಮುಹಮ್ಮದ್ ನದೀಂ, ಹೈದರ್ ಪರ್ತಿಪ್ಪಾಡಿ, ಪಾಲುದಾರರಾದ ಸೀದಿಯಬ್ಬ, ತಯ್ಯುಬ್, ಫೈಝಲ್, ಹಸನಬ್ಬ, ಮುಹಮ್ಮದ್ ಉಪಸ್ಥಿತರಿದ್ದರು.