ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗಡೆಯನ್ನು ಭೇಟಿಯಾದ ಕರ್ನಾಟಕದ ಸ್ಪೀಕರ್ ಯು.ಟಿ ಖಾದರ್
ಮಂಗಳೂರು: ಕರ್ನಾಟಕ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರು ರಾಜಸ್ಥಾನದಲ್ಲಿ ಇಂದು ಅಲ್ಲಿನ ರಾಜ್ಯಪಾಲರಾದ ಹರಿಭಾವು ಬಾಗಡೆ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.
ನಂತರ ಉಭಯ ರಾಜ್ಯಗಳ ಸದನದ ನಿಯಮಾವಳಿಗಳ ಕುರಿತಾಗಿ ಚರ್ಚೆ ನಡೆಸಿ ಮಾತುಕತೆ ನಡೆಸಿದರು.
ಭಾರತೀಯ ಯುವ ಸಂಸತ್ ನ 27ನೇ ರಾಷ್ಟ್ರೀಯ ಅಧಿವೇಶನ ರಾಜಸ್ಥಾನದ ಜೈಪುರದಲ್ಲಿ ಸೆ.17ರ ತನಕ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಭಾಗವಹಿಸುತ್ತಿದ್ದಾರೆ.
ಪ್ರತಿ ಅಧಿವೇಶನದಲ್ಲೂ ಆತಿಥೇಯ ರಾಜ್ಯವನ್ನು ಹೊರತುಪಡಿಸಿ ದೇಶದ ಬೇರೆ ರಾಜ್ಯಗಳ ವಿಧಾನಸಭೆಗಳ ಓರ್ವ ಸ್ಪೀಕರ್ ರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗುತ್ತದೆ. ಅದರಂತೆ ಈ ಬಾರಿ ಯು.ಟಿ. ಖಾದರ್ರನ್ನು ಆಹ್ವಾನಿಸಲಾಗಿದೆ.
Next Story