ಇಂದು (ಜ.31)ಕುದ್ರೋಳಿ ಮಖಾಂ ಉರೂಸ್ ಪ್ರಾರಂಭ
ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಷರೀಫ್ ಕುದ್ರೋಳಿ ಮಂಗಳೂರು ಪ್ರತೀ ಎರಡು ವರ್ಷ ಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮ ಜನವರಿ 31 ರಿಂದ ಪೆಬ್ರವರಿ 08 ರ ತನಕ 9 ದಿವಸಗಳು ನಡೆಯಲಿದ್ದು ಇದರ ಪ್ರಾರಂಭದ ದಿವಸವಾದ ಇಂದು ದರ್ಗಾ ಅಧ್ಯಕ್ಷ ಮುಸ್ತಾಕ್ ಅಧ್ಯಕ್ಷ ತೆಯಲ್ಲಿ ಬೃಹತ್ ಮೌಲಿದ್ ಹಾಗೂ ರಿಫಾಯಿ ರಾತೀಬ್ ಮಜ್ಲಿಸ್ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಎಲ್ಲಾ ದೀನಿ ಸ್ನೇಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ತಿಳಿಸಿದ್ದಾರೆ.
Next Story