ಮಂಗಳೂರು: ಜು.20ರಂದು 'ಎಕ್ಸ್ ಪರ್ಟ್ ಮೊಬೈಲ್' ಶುಭಾರಂಭ
ಒಂದೇ ಸೂರಿನಡಿ ಮಲ್ಟಿಬ್ರ್ಯಾಂಡ್ ಮೊಬೈಲ್‌ಗಳ ಖರೀದಿಗೆ ಅವಕಾಶ

ಮಂಗಳೂರು, ಜು.18: ನಗರದ ಪಿವಿಎಸ್ ಸರ್ಕಲ್ ಬಳಿಯ ಮಾನಸ ಟವರ್ ನಲ್ಲಿ ಮೊಬೈಲ್ ಫೋನ್ ಗಳ ನೂತನ ಶೋರೂಂ 'ಎಕ್ಸ್ ಪರ್ಟ್ ಮೊಬೈಲ್' ಜು.20ರಂದು ಬೆಳಗ್ಗೆ 9ಕ್ಕೆ ಶುಭಾರಂಭಗೊಳ್ಳಲಿದೆ.
ಒಂದೇ ಸೂರಿನಡಿ ಉತ್ತಮ ಗುಣಮಟ್ಟ ಮತ್ತು ಅತೀ ಕಡಿಮೆ ದರದಲ್ಲಿ ಮಲ್ಟಿ ಬ್ರ್ಯಾಂಡ್ ಗಳ ಮೊಬೈಲ್ ಫೋನ್ ಗಳು, ಪರಿಣಿತರಿಂದ ಮೊಬೈಲ್ ಸರ್ವೀಸ್ ಮತ್ತು ಎಲ್ಲ ಬ್ರ್ಯಾಂಡ್ ಮೊಬೈಲ್ ಗಳ ಬಿಡಿಭಾಗಗಳು ಮಿತದರದಲ್ಲಿ ಇಲ್ಲಿ ಲಭ್ಯ. ಅಲ್ಲದೆ ಸ್ಮಾರ್ಟ್ ವಾಚ್ ಗಳು, ಅಲ್ಟ್ರಾ ವಾಚ್ ಗಳು, ಬ್ಲೂಟೂತ್ ಹೆಡ್ ಸೆಟ್ ಗಳು, ಬ್ಲೂಟೂತ್ ಸ್ವೀಕರ್ ಗಳು, ಐ ಪೋಡ್ ಗಳ ವೈವಿಧ್ಯಮಯ ಸಂಗ್ರಹವಿದೆ.
ಇಎಂಐ ಸೌಲಭ್ಯ: ಎಲ್ಲ ಮಲ್ಟಿ ಬ್ರ್ಯಾಂಡೆಡ್ ಮೊಬೈಲ್ ಗಳ ಖರೀದಿಗೆ ಫೈನಾನ್ಸ್ ಮತ್ತು ಬ್ಯಾಂಕ್ಗಳ ಇಎಂಐ ಸೌಲಭ್ಯ ದೊರೆಯಲಿದೆ.
ವಿಶೇಷ ಕೊಡುಗೆ: ಶುಭಾರಂಭದ ಪ್ರಯುಕ್ತ ಎಲ್ಲ ಮೊಬೈಲ್ ಫೋನ್ ಗಳ ಸ್ಕ್ರೀನ್ ಗಾರ್ಡ್ ಗಳು ಕೇವಲ 49 ರೂ. ಮತ್ತು ಅಲ್ಟ್ರಾ ವಾಚ್ ಗಳು ಕೇವಲ ರೂ.999ಗೆ ಗ್ರಾಹಕರಿಗೆ ದೊರೆಯಲಿದೆ. ಈ ಆಫರ್ ಒಂದು ದಿನ ಮಾತ್ರ ಇರಲಿದೆ ಎಂದು 'ಎಕ್ಸ್ ಪರ್ಟ್ ಮೊಬೈಲ್' ಮಾಲಕ ಶಾಕಿರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.