ಮಂಗಳೂರು ವಿವಿ ಘಟಕ ಕಾಲೇಜುಗಳನ್ನು ಸರಕಾರದ ಅಧೀನಕ್ಕೆ ಪಡೆಯಲು ಮನವಿ
ಮಂಗಳೂರು: ಮಂಗಳೂರು ವಿವಿ ಘಟಕ ಕಾಲೇಜುಗಳನ್ನು ರಾಜ್ಯ ಸರಕಾರದ ಅಧೀನಕ್ಕೆ ಪಡೆಯಲು ಆಗ್ರಹಿಸಿ ನಿರ್ಣಯ ಕೈಗೊಳ್ಳವಂತೆ ನರಿಂಗಾನ, ಕಿನ್ಯಾ, ಕೊಣಾಜೆ, ಫಜೀರು ಗ್ರಾಪಂಗಳಿಗೆ ವಿವಿ ಘಟಕ ಕಾಲೇಜುಗಳ ಉಳಿಸಿ ಹೋರಾಟ ಸಮಿತಿಯು ಮನವಿ ಸಲ್ಲಿಸಿದೆ.
ಜನರ ತೀವ್ರ ವಿರೋಧದಿಂದಾಗಿ ಮುಚ್ಚುವ ನಿರ್ಧಾರವನ್ನು ಸಡಿಲಿಸಿದ ವಿವಿ ಆಡಳಿತವು ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಇದೀಗ ವಿವಿಯ ನಾಲ್ಕು ಘಟಕ ಕಾಲೇಜುಗಳನ್ನು ಮುಚ್ಚುವ ಪ್ರಕ್ರಿಯೆ ಮತ್ತೆ ಆರಂಭ ಗೊಂಡಿವೆ. ಹಾಗಾಗಿ ವಿವಿ ಘಟಕ ಕಾಲೇಜುಗಳನ್ನು ರಾಜ್ಯ ಸರಕಾರ ತನ್ನ ಅಧೀನಕ್ಕೆ ಪಡೆದು ಶಿಕ್ಷಣ ಇಲಾಖೆಯಿಂದಲೇ ನಡೆಸಬೇಕು. ಅಲ್ಲದೆ ಈ ಬಗ್ಗೆ ಗ್ರಾಪಂಗಳು ನಿರ್ಣಯ ಕೈಗೊಂಡು ರಾಜ್ಯ ಸರಕಾರಕ್ಕೆ ಸಲ್ಲಿಸಬೇಕು ಎಂದು ಸಮಿತಿಯು ಆಗ್ರಹಿಸಿದೆ.
ನರಿಂಗಾನ ಗ್ರಾಪಂಗೆ ಅಧ್ಯಕ್ಷ ನವಾಝ್, ಕಿನ್ಯಾ ಗ್ರಾಪಂನಲ್ಲಿ ಪಿಡಿಒ ತುಳಸಿ,ಕೊಣಾಜೆ ಗ್ರಾಪಂನಲ್ಲಿ ಕಾರ್ಯದರ್ಶಿ ಚಿತ್ರಾಕ್ಷಿ, ಫಜೀರು ಗ್ರಾಪಂನಲ್ಲಿ ಕಾರ್ಯದರ್ಶಿ ನಾಗೇಶ್ ದೇವಾಡಿಗ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಹೋರಾಟ ಸಮಿತಿಯ ಸಂಚಾಲಕ ರಿಝ್ವಾನ್ ಹರೇಕಳ, ರಝಾಕ್ ಮುಡಿಪು, ರಝಾಕ್ ಮೊಂಟೆಪದವು, ಅಬೂಬಕ್ಕರ್ ಜಲ್ಲಿ, ಮುಹಮ್ಮದ್ ಜೀಲಾನಿ, ಸಿರಾಜ್ ಬಿ.ಎಂ. ಮತ್ತಿತರರಿದ್ದರು.