ಹರೇಕಳ ಡ್ಯಾಂ ವೀಕ್ಷಣೆ ಮಾಡಿದ ಸಚಿವ ಎನ್ ಎಸ್ ಬೋಸರಾಜು
ಕೊಣಾಜೆ: ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಇಲಾಖೆ , ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್ . ಬೋಸರಾಜು ಅವರು ಸಣ್ಣ ನೀರಾವರಿ ಇಲಾಖೆ ವತಿಯಿಂದ ಹರೇಕಳದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟು ಕಾಮಗಾರಿಯನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ತಿನ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ಸಣ್ಣ ನೀರಾವರಿಯ ಇಲಾಖೆಯ ಅಭಿಯಂತರು, ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಬದ್ರುದ್ದೀನ್, ಉಪಾಧ್ಯಕ್ಷ ಅಬ್ದುಲ್ ಮಜೀದ್,ಯು.ಟಿ.ಇಫ್ತಿಕಾರ್ ಆಲಿ, ಬಶೀರ್ ಉಂಬುದ, ಸತ್ತಾರ್ ಬಾವಲಿಗುರಿ, ಹನೀಫ್, ಸಿದ್ದೀಕ್ ಮೊದಲಾದವರು ಉಪಸ್ಥಿತರಿದ್ದರು.
ಇಂದು ಮಂಗಳೂರಿನಲ್ಲಿ ನೇತ್ರಾವತಿ ನದಿ ವೀಕ್ಷಣೆ ಮಾಡಿ, ಪ್ರವಾಹ ಸಂದರ್ಭದಲ್ಲಿ ನದಿ ಪಕ್ಕದಲ್ಲಿ ಉಂಟಾಗುವ ಹಲವು ಸಮಸ್ಯೆಗಳ ಕುರಿತು ಸ್ಥಳ ಪರಿಶೀಲನೆ ಮಾಡಿದೆನು. pic.twitter.com/I40VPOYRwx
— N.S Boseraju (@NsBoseraju) September 9, 2023
Next Story