ನಾಟೆಕಲ್: ನೂರುಲ್ ಇಸ್ಲಾಂ ಮದ್ರಸ ಉದ್ಘಾಟನೆ
ಕೊಣಾಜೆ: ನಾಟೆಕಲ್ಲಿನ ವಿಜಯನಗರದ ಮಸ್ಜಿದುರ್ರಹ್ಮ ಅಧೀನದಲ್ಲಿ ನೂತನವಾಗಿ ಕಾರ್ಯಾಚರಿಸಲಿರುವ ನೂರುಲ್ ಇಸ್ಲಾಂ ಮದ್ರಸದ ಉದ್ಘಾಟನೆ ಹಾಗೂ ಪ್ರವೇಶೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು.
ಮಸ್ಜಿದುರ್ರಹ್ಮ ಜುಮಾ ಮಸೀದಿ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಜಾಸ್ಮಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಖತೀಬ್ ಅಬೂಬಕ್ಕರ್ ಸಿದ್ದೀಖ್ ಝೈನಿ, "ವಿದ್ಯಾರ್ಥಿಗಳಿಗೆ ಮದ್ರಸಾ ಶಿಕ್ಷಣವು ಅವರ ನೈತಿಕ ಜೀವನಕ್ಕೆ ಭದ್ರ ಬುನಾದಿ ಮಾತ್ರವಲ್ಲದೆ ಗುರುಹಿರಿಯರನ್ನು ಗೌರವದಿಂದ ನೋಡಿಕೊಳ್ಳುವ ಪರಿಪಾಠವನ್ನು ರೂಢಿಸಿಕೊಳ್ಳಲು ಸಹಕಾರಿಯಾಗಿದೆ" ಎಂದರು.
ಅತಿಥಿಗಳಾಗಿ ಸ್ಥಳೀಯ ಮುಅದ್ದಿನ್ ಅಬೂಬಕ್ಕರ್ ಸಿದ್ದೀಖ್ ಮದನಿ, ಉದ್ಯಮಿ ಹಾಜಿ ಇಕ್ಬಾಲ್ ಹುಬ್ಬಳ್ಳಿ, ಹಿರಿಯ ನ್ಯಾಯವಾದಿ ಹಾಜಿ ಯೂಸುಫ್ ವಕ್ತಾರ್, ಹಾಜಿ ಅಬ್ದುಲ್ ರಝಾಕ್, ಅಬ್ದುಲ್ ಖಾದರ್ ಬಾವ, ಮಸೀದಿ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಕೀಂ ಡ್ಯಾನಿಷ್, ಕೋಶಾಧಿಕಾರಿ ಕೆ.ಎಸ್ ಇಸ್ಮಾಯಿಲ್, ಸದಸ್ಯರಾದ ಅಬ್ಬಾಸ್ ಎನ್.ಎಂ, ಮುಹಮ್ಮದ್ ಶರೀಫ್, ಸಿದ್ದೀಖ್ ಕಂಡಿಲ ಅಬ್ದುಲ್ ಖಾದರ್ ಅಡ್ಯಾರ್, ಹಾಜಿ ಪಿ.ಹೆಚ್ ಅಬ್ದುಲ್ ರಹಿಮಾನ್ ಏಶ್ಯನ್, ಮುಹಮ್ಮದ್ ಕಲ್ಕಟ್ಟ ಉಪಸ್ಥಿತರಿದ್ದರು.
ಮಸೀದಿ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಇಸ್ಮಾಯಿಲ್ ಮಾಸ್ಟರ್ ಸ್ವಾಗತಿಸಿದರು. ಕಾರ್ಯದರ್ಶಿ ಮುಹಮ್ಮದ್ ಕಮಾಲ್ ವಂದಿಸಿದರು. ಅಬ್ದುಲ್ ಅಝೀಝ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.