ಕೋಟೆಕಾರ್ ಪ.ಪಂ. ಸಾಮಾನ್ಯ ಸಭೆ; ಅಕ್ರಮ ಕಟ್ಟಡ, ಹೆದ್ದಾರಿ, ಕುಡಿಯುವ ನೀರು ಕಾಮಗಾರಿ ಬಗ್ಗೆ ಚರ್ಚೆ
ಉಳ್ಳಾಲ: ಅಧಿಕಾರಿಗಳ ಗೈರು, ಅಕ್ರಮ ಕಟ್ಟಡ, ಅಂಗನವಾಡಿ ಕಟ್ಟಡ, ಹೆದ್ದಾರಿ ಸರ್ವಿಸ್ ರಸ್ತೆ, ಕುಡಿಯುವ ನೀರು ಕಾಮಗಾರಿ ಬಗ್ಗೆ ಪರ ವಿರೋಧ ಚರ್ಚೆಗಳು ಕೋಟೆಕಾರ್ ಪ.ಪಂ. ಸಭೆಯಲ್ಲಿ ನಡೆಯಿತು.
ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ದಿವ್ಯ ಸತೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ಗೈರಾದ ಬಗ್ಗೆ ಆಡಳಿತ ರೂಡ ಪಕ್ಷದ ಸದಸ್ಯ ಸುಜಿತ್ ಮಾಡೂರು ಪ್ರಾಸ್ತಾಪಿಸಿ ಅಧಿಕಾರಿಗಳು ಅನು ಪಸ್ಥಿತಿಯಲ್ಲಿ ಸಭೆ ನಡೆಸುವುದು ಬೇಡ.ನಿರಂತರಇಲಾಖಾಧಿಕಾರಿಗಳು ಗೈರು ಹಾಜರಾದರೆ ಆಯಾ ಇಲಾಖೆಗೆ ಸಂಬಂಧಿಸಿದ ವಿಚಾರ ಯಾರಲ್ಲಿ ಚರ್ಚಿಸಬೇಕು ಎಂದು ಪ್ರಶ್ನಿಸಿದ ಅವರು,ಅಧಿಕಾರಿಗಳು ಇಲ್ಲದ ಕಾರಣ ಸಭೆಯನ್ನು ಮುಂದೂಡುವ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮಾಲಿನಿ ಅವರು,ಎಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ.ಕೆಲವರಿಗೆ ನಿನ್ನೆ ಮಾಹಿತಿ ನೀಡಿದ್ದೇವೆ . ಅವರಿಗೆ ಬೇರೆ ಸಭೆಯ ಒತ್ತಡ ಇರಲೂ ಬಹುದು ಎಂದು ಸಭೆಗೆ ತಿಳಿಸಿದರು. ಇದರಿಂದ ಆಕ್ರೋಶ ಗೊಂಡ ಸದಸ್ಯರು ಸಾಮಾನ್ಯ ಸಭೆ ನಡೆಯುವ ಏಳು ದಿನಗಳ ಮೊದಲು ನೋಟೀಸ್ ನೀಡಬೇಕು.ಅಧಿಕಾರಿಗಳು ಗೈರು ಹಾಜರಾಗುವುದಕ್ಕೆ ಸಮಜಾಯಿಷಿ ನೀಡುವುದು ಬೇಡ.ಈ ಬಗೆ ಶಾಸಕ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳಬೇಕು. ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಅಹ್ಮದ್ ಬಾವ ಮಾತನಾಡಿ, ಅಧಿಕಾರ ನಿಮ್ಮದು ಇದೆ.ಅಧಿಕಾರಿಗಳನ್ನು ಕರೆಸುವ ಜವಾಬ್ದಾರಿ ನಿಮ್ಮದು. ಮುಂದಿನ ಸಭೆಗೆ ಅಧಿಕಾರಿಗಳು ಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಪ.ಪಂ.ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡ ಹಾಗೂ ಸಿಬ್ಬಂದಿ ಕೊರತೆ ಇರುವ ಬಗ್ಗೆ ಶಿಶು ಅಭಿವೃದ್ಧಿ ಅಧಿಕಾರಿ ಸೀತಾ ಕೆ ಅವರನ್ನು ಸದಸ್ಯರು ತರಾಟೆಗೈದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿಶು ಅಭಿವೃದ್ಧಿ ಅಧಿಕಾರಿ ಸೀತಾ ಅವರು ಅಂಗನವಾಡಿ ವಾರ್ಡ್ 11 ರಲ್ಲಿ ಇದೆ.ಇದನ್ನು 12 ನೇ ವಾರ್ಡ್ ಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿತ್ತು.ಇದಕ್ಕೆ ಬಳಿಕ ಆಕ್ಷೇಪ ವ್ಯಕ್ತವಾಯಿತು. ಬಳಿಕ ಇದನ್ನು 13 ನೇ ವಾರ್ಡ್ ಗೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕೂ ವಿರೋಧ ವ್ಯಕ್ತವಾಯಿತು ಎಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ 11 ನೆ ವಾರ್ಡ್ ನಿಂದ ಅಂಗನವಾಡಿ ಸ್ಥಳಾಂತರ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಯಾರು? ಈ ವಾರ್ಡ್ ನಲ್ಲಿ ರುವ ಅಂಗನವಾಡಿ ಯಲ್ಲಿ ಸಿಬ್ಬಂದಿ ಇಲ್ಲ, ಮೂವರು ಮಕ್ಕಳು ಇರುತ್ತಾರೆ.ಮೂಲಭೂತ ಸೌಕರ್ಯ ಕೂಡ ಇಲ್ಲ ಎಂದು ಆರೋಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ಸದಸ್ಯರೊಬ್ಬರು 13ನೇ ವಾರ್ಡ್ ಗೆ ಅಂಗನವಾಡಿ ಬೇಕು.ಬೇರೆ ಕಡೆಯಿಂದ ಸ್ಥಳಾಂತರ ಮಾಡುವುದು ಬೇಡ.ಸ್ವಂತ ಕಟ್ಟಡ ನಿರ್ಮಾಣ ಮಾಡಿ ಆರಂಭಿಸಬೇಕು.ಜಲಾಲ್ ಬಾಗ್, ಪಾನೀರ್, ಅಂಗನವಾಡಿಗೆ ಸ್ವಂತ ಕಟ್ಟಡ ಇಲ್ಲ, ಸಿಬ್ಬಂದಿ ಇಲ್ಲ. ಇದಕ್ಕೆ ವ್ಯವಸ್ಥೆ ಆಗಬೇಕು.ನೂತನ ಕಟ್ಟಡ ನಿರ್ಮಾಣ ಮಾಡುವ ಬಗೆ ನಿರ್ಣಯ ಮಾಡಿ ಸಂಬಂಧಪಟ್ಟವರ ಗಮನ ಹರಿಸಬೇಕು ಎಂದು ಸದಸ್ಯರು ಅಧ್ಯಕ್ಷ ದಿವ್ಯ ಸತೀಶ್ ಅವರ ಗಮನ ಸೆಳೆದರು.
ರಸ್ತೆ ಸಮಸ್ಯೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಮಾಡಿದ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಹೆದ್ದಾರಿ ಯಲ್ಲಿ ಸರ್ವಿಸ್ ರಸ್ತೆ ಕೊರತೆ ಇದೆ.ಇದರಿಂದ ಅಪಘಾತ ಹೇರಳವಾಗಿ ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ವಿಸ್ ರಸ್ತೆ ಸಮಸ್ಯೆ ಇತ್ಯರ್ಥ ಪಡಿಸುವಂತೆ ಕ್ರಮ ಕೈಗೊಳ್ಳಬೇಕು.ಜತೆಗೆ ನೋ ಪಾರ್ಕಿಂಗ್ ಜಾಗದಲ್ಲಿ ಬೋರ್ಡ್ ಹಾಕಬೇಕು.ಇದಕ್ಕೆ ಸಂಚಾರಿ ಪೊಲೀಸ್ ಹಾಗೂ ಪಟ್ಟಣ ಪಂಚಾಯತ್ ಜತೆಯಾಗಿ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು. ಇದಕ್ಕೆ ಸಹ ಮತ ವ್ಯಕ್ತಪಡಿಸಿದ ಸದಸ್ಯರು ,ನೋ ಪಾರ್ಕಿಂಗ್ ಜಾಗ ನೀವು ತೋರಿಸಿ. ಬೋರ್ಡ್ ಹಾಕುವ ಕೆಲಸ ನಾವು ಮಾಡು ತ್ತೇವೆ ಎಂದರು.
ಬಹು ನೀರಾವರಿ ಕುಡಿಯುವ ನೀರಿನ ಯೋಜನೆ ಬಗ್ಗೆ ಸಭೆಯಲ್ಲಿ ಮುಖ್ಯಾಧಿಕಾರಿ ಮಾಲಿನಿ ವಿಷಯ ಪ್ರಸ್ತಾಪಿಸಿದಾಗ, ಸದಸ್ಯ ರೊಬ್ಬರು,ಕುಡಿಯುವ ನೀರಿನ ಕಾಮಗಾರಿ ಸರಿಯಾಗಿ ಮಾಡಲಿ.ಅರ್ಧಂಬರ್ಧ ಮಾಡುವುದು ಬೇಡ. ಕೊಂಡಾಣ, ಬೀರಿ, ದೇವಸ್ಥಾನ ಇರುವ ಜಾಗದಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿ ಆಗಬೇಕು.ಕಾಮಗಾರಿ ಮಾಡುವವರಿಗೆ ಸರಿಯಾಗಿ ವೇತನ ಪಾವತಿ ಮಾಡಬೇಕು.ಹಣ ಪಾವತಿ ಆದರೆ ಸಮಸ್ಯೆ ಆಗುವುದಿಲ್ಲ ಎಂದು ಕುಡಿಯುವ ನೀರು ಕಾಮಗಾರಿಯ ಇಂಜಿನಿಯರ್ ಗೆ ಸೂಚಿಸಿದರು.
ನಡುಕುಮೇರುವಿನಲ್ಲಿ ಸ.ನಂ 262 /2ಡಿ ರಲ್ಲಿ ಪಂಚಾಯತ್ ಗೆ ಕಾದಿರಿಸಿದ 1.35 ಎಕ್ರೆ ನಿವೇಶನಕ್ಕೆ ತಡೆಬೇಲಿ ಹಾಕಿ ನಾಮಫಲಕ ಅಳವಡಿಸಿ ಈ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸಲು ಕಳೆದ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ಸರ್ವಾನುಮತದ ನಿರ್ಣಯಕ್ಕೆ ಪ್ರತಿ ಪಕ್ಷದ ನಾಯಕ ಅಹಮ್ಮದ್ ಬಾವ ಅಜ್ಜಿನಡ್ಕ ಅವರು ಆಕ್ಷೇಪ ವ್ಯಕ್ತಪಡಿಸಿದರು.
ನಡುಕುಮೇರುವಿನಲ್ಲಿ ಮನೆಗಳನ್ನು ಕಟ್ಟಿದ ಬಡ ಜನರು ಜಮೀನು ಪಂಚಾಯತ್ ಗೆ ಸೇರುವ ಮೊದಲೇ ಹಕ್ಕು ಪತ್ರಕ್ಕೆ ಅರ್ಜಿ ಕೊಟ್ಟಿದ್ದಾರೆ.ಹಾಗಾಗಿ ಅಲ್ಲಿ ನಿರ್ಮಿಸಿರುವ ಮನೆಗಳ ತೆರವು ಕೆಲಸಕ್ಕೆ ಪಂಚಾಯತ್ ಆಡಳಿತ ಮುಂದಾಗಬಾರದು ಎಂದು ವಿನಂತಿಸಿದರು.
ಕಟ್ಟಡ ತೆರವು ಬಗ್ಗೆ ಆಡಳಿತ ಬಿಜೆಪಿ ಪಕ್ಷದ ಸದಸ್ಯರ ಬಹುಮತದಿಂದ ನಿರ್ಣಯ ಕೈಗೊಂಡಿರಬಹುದೇ ಹೊರತು ಅದಕ್ಕೆ ಸರ್ವಾನುಮತ ಇಲ್ಲ .ಆ ಜಾಗಕ್ಕೆ ಬೇಲಿ ಹಾಕಿ ಪಂಚಾಯತ್ನ ಆಸ್ತಿ ಎಂದು ಬೋರ್ಡ್ ಹಾಕಿ ಎಂದು ಆಡಳಿತ ರೂಡ ಪಕ್ಷದ ಸದಸ್ಯ ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಸದಸ್ಯ ಅಹಮ್ಮದ್ ಬಾವ ಅವರು,ನಿರ್ಮಾಣಗೊಂಡ ಮನೆಗಳನ್ನು ಮಾತ್ರ ಕೆಡವಲು ಮೂರು ಮಂದಿ ನಾಮ ನಿರ್ದೇಶಿತ ಸದಸ್ಯರ ಸಹಿತ ಒಟ್ಟು ಒಂಭತ್ತು ಮಂದಿ ವಿರೋಧ ಇದೆ . ನಮ್ಮ ಆಕ್ಷೇಪದ ಬಗೆ ನಿರ್ಣಯ ಪುಸ್ತಕ ದಲ್ಲಿ ಬರೆಯಬೇಕೆಂದು ಸಭಾಧ್ಯಕ್ಷರಿಗೆ ಒತ್ತಾಯಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಉಪಸ್ಥಿತರಿದ್ದರು.