ಕರ್ನಾಟಕ ಮುಸ್ಲಿಮ್ ಜಮಾಅತ್, ಎಸ್.ವೈ.ಎಸ್. ಮಂಗಳೂರು ನಗರ ಘಟಕದ ವಾರ್ಷಿಕ ಮಹಾಸಭೆ

ಮಂಗಳೂರು: ಕರ್ನಾಟಕ ಮುಸ್ಲಿಮ್ ಜಮಾಅತ್ ಮತ್ತು ಎಸ್.ವೈ.ಎಸ್. ಮಂಗಳೂರು ನಗರ ಘಟಕದ ವಾರ್ಷಿಕ ಮಹಾಸಭೆಯು ಫೆಬ್ರವರಿ 17ರಂದು ಕಂಕನಾಡಿಯ ಜಂಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜರುಗಿತು.
ಸಭೆಯನ್ನು ಸತ್ತಾರ್ ಸಖಾಫಿ ಅಡ್ಯಾರ್ ಪದವು ಉದ್ಘಾಟಿಸಿದರು. ರಫೀಕ್ ಮದನಿ ದುಆಗೈದರು. ಅಬುಲ್ ವಫಾ ಖಾಸಿಂ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಯಾಕೂಬ್ ಸಅದಿ ನಾವೂರು ಮುಖ್ಯ ಭಾಷಣ ಮಾಡಿದರು. ಜಿಲ್ಲಾ ನಾಯಕರಾದ ನವಾಝ್ ಸಖಾಫಿ, ಸ್ಥಳೀಯ ಮಸೀದಿ ಖತೀಬ್ ಹೈದರ್ ಅಹ್ಸನಿ ಉಪಸ್ಥಿತರಿದ್ದರು.
ಇದೇ ವೇಳೆ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬುಲ್ ವಫಾ ಖಾಸಿಂ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಸಿದ್ದೀಕ್ ಮಂಗಳೂರು, ಕೋಶಾಧಿಕಾರಿಯಾಗಿ ಅಬ್ಬಾಸ್ ಹಾಜಿ ಬಿಜೈ, ಉಪಾಧ್ಯಕ್ಷರಾಗಿ ಅಬೂಬಕರ್ ಬೋಳಾರ, ಮುಸ್ತಫ ಫಳ್ನೀರ್ ಆಯ್ಕೆಯಾದರು.
ಕಾರ್ಯದರ್ಶಿಗಳಾಗಿ ಪಿ.ಎ.ಮುಹಮ್ಮದ್ ರಫೀಕ್ ಮದನಿ(ದಅವಾ), ಕೆ.ಸಿ.ಎಣ್ಮೂರು(ಸಂಘಟನೆ), ರಶೀದ್ ಮಂಗಳೂರು(ತರಬೇತಿ), ಅಝೀಝ್ ಬಿಕರ್ನಕಟ್ಟೆ(ಸಹಾಯ), ಮಜೀದ್ ಸಅದಿ(ಇಸಾಬ), ಎ.ಮುಹಮ್ಮದ್ ಹನೀಫ್(ಮಾಧ್ಯಮ) ಹಾಗೂ 33 ಸದಸ್ಯರು ಆಯ್ಕೆ ಮಾಡಲಾಯಿತು.
ಮುಸ್ಲಿಮ್ ಜಮಾಅತ್ ಸರ್ಕಲ್ ಕೌನ್ಸಿಲರ್ ಗಳಾಗಿ ಅಬುಲ್ ವಫಾ ಖಾಸಿಂ ಮುಸ್ಲಿಯಾರ್, ಅಬ್ಬಾಸ್ ಹಾಜಿ ಬಿಜೈ, ಅಶ್ರಫ್ ಕಿನಾರ, ಅಬೂಬಕರ್ ಬೋಳಾರ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಶೇಖ್ ಬಾವ ಹಾಜಿ, ರಫೀಕ್, ಹನೀಫ್ ಬಿಕರ್ನಕಟ್ಟೆ, ಹಸನ್ ಮುಸ್ಲಿಯಾರ್ ಆಯ್ಕೆಯಾದರು.
ಎಸ್.ವೈ.ಎಸ್. ಸರ್ಕಲ್ ಕೌನ್ಸಿಲರ್ ಗಳಾಗಿ ಅಬೂಬಕರ್ ಸಿದ್ದೀಕ್ ಮಂಗಳೂರು, ಪಿ.ಎ.ಮುಹಮ್ಮದ್ ರಫೀಕ್ ಮದನಿ, ಹಸನ್ ಪಾಂಡೇಶ್ವರ, ಕೆ.ಸಿ.ಎಣ್ಮೂರು, ಅಝೀಝ್, ಮಜೀದ್ ಸಅದಿ, ಎ.ಮುಹಮ್ಮದ್ ಹನೀಫ್, ರಫೀಕ್ ಮಂಗಳೂರು, ಇಮ್ರಾನ್ ಮುಗೇರ್, ಶಿಹಾಬ್ ಜೆಪ್ಪು, ಆಸಿಫ್ ಮುಗೇರ್ ಆಯ್ಕೆಯಾದರು.
ಎಸ್.ವೈ.ಎಸ್. ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.