ಎಸ್ ವೈ ಎಸ್ ಮಂಗಳೂರು ಝೋನ್ ಸಮಿತಿಯ ನೂತನ ಅಧ್ಯಕ್ಷರಾಗಿ ಹಾಫಿಳ್ ಯಾಕೂಬ್ ಸಅದಿ

ಹಾಫಿಳ್ ಯಾಕೂಬ್ ಸಅದಿ | ನವಾಝ್ ಸಖಾಫಿ
ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(ಎಸ್ ವೈ ಎಸ್) ಇದರ ಮಂಗಳೂರು ಝೋನ್ ದೈವಾರ್ಷಿಕ ಮಹಾಸಭೆಯು ಫೆ.26ರಂದು ಕಂಕನಾಡಿ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಝೋನ್ ಅಧ್ಯಕ್ಷ ಅಬ್ದುಲ್ ಸತ್ತಾರ್ ಸಖಾಫಿ ಅಡ್ಯಾರ್ ಪದವು ಅಧ್ಯಕ್ಷತೆಯಲ್ಲಿ ನಡೆಯಿತು.
ಕಂಕನಾಡಿ ಮಸೀದಿಯ ಖತೀಬ್ ಅಬ್ದುಲ್ ರಹ್ಮಾನ್ ಸಅದಿ ದುಆಗೈದರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಉದ್ಘಾಟಿಸಿದರು. ಎಸ್ ವೈ ಎಸ್ ಜಿಲ್ಲಾ ಕಾರ್ಯದರ್ಶಿ ಬದ್ರುದ್ದೀನ್ ಅಝ್ಹರಿ ಸಂಘಟನಾ ತರಬೇತಿ ನಡೆಸಿದರು. ನಂತರ ಜಿಲ್ಲಾ ನಾಯಕ ತೌಸೀಫ್ ಸಅದಿ ಹರೇಕಳ ನೂತನ ಸಾಲಿನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಝೋನ್ ಕಾರ್ಯದರ್ಶಿ ನಝೀರ್ ಹಾಜಿ ಲುಲು ಸ್ವಾಗತಿಸಿ, ವರದಿ ವಾಚಿಸಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಹಾಫಿಳ್ ಯಾಕೂಬ್ ಸಅದಿ ನಾವೂರು, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಸಖಾಫಿ ಅಡ್ಯಾರ್ ಪದವು, ಕೋಶಾಧಿಕಾರಿಯಾಗಿ ನಝೀರ್ ಹಾಜಿ ಲುಲು, ದಅವಾ ಉಪಾಧ್ಯಕ್ಷರಾಗಿ ಮನ್ಸೂರ್ ಮದನಿ ವಳವೂರು, ಕಾರ್ಯದರ್ಶಿಯಾಗಿ ಸಿರಾಜುದ್ದೀನ್ ನಿಝಾಮಿ ಕೂಳೂರು, ಸಂಘಟನಾ ಉಪಾಧ್ಯಕ್ಷ ರಾಗಿ ಅಬ್ದುಲ್ ಸತ್ತಾರ್ ಸಖಾಫಿ ಅಡ್ಯಾರ್, ಕಾರ್ಯದರ್ಶಿಯಾಗಿ ಅಬೂಬಕರ್ ಸಿದ್ದೀಕ್ ಸಿ.ಸಿ., ಸಾಂತ್ವನ ಮತ್ತು ಇಸಾಬ ಉಪಾಧ್ಯಕ್ಷರಾಗಿ ಹಸನ್ ಪಾಂಡೇಶ್ವರ, ಕಾರ್ಯದರ್ಶಿಯಾಗಿ ಅಬ್ದುಲ್ ಜಬ್ಬಾರ್ ಕಣ್ಣೂರು, ಸೋಶಿಯಲ್ ಆ್ಯಂಡ್ ಕಲ್ಚರಲ್ ಕಾರ್ಯದರ್ಶಿಯಾಗಿ ಕೆ.ಸಿ.ಸುಲೈಮಾನ್ ಮುಸ್ಲಿಯಾರ್ ಎಣ್ಮೂರು, ಮೀಡಿಯಾ ಕಾರ್ಯದರ್ಶಿಯಾಗಿ ಹಾಫಿಳ್ ಸಿದ್ದೀಕ್ ಸಖಾಫಿ ವಳವೂರು ಇವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸೈಯದ್ ಇಸ್ಹಾಕ್ ತಂಙಳ್ ಕಣ್ಣೂರು, ರಫೀಕ್ ಅಡ್ಯಾರ್ ಪದವು, ಹಾರಿಸ್ ಸಿಆರ್ ಕಣ್ಣೂರು, ಇಕ್ಬಾಲ್ ಅಹ್ಸನಿ ಬಜಾಲ್, ಅಬ್ದುಲ್ ರಶೀದ್ ಐಬಿಎಂ, ಮಜೀದ್ ಸಅದಿ ಮಂಗಳೂರು, ಅಬ್ದುಲ್ ಅಝೀಝ್ ಬಿಕರ್ನಕಟ್ಟೆ, ಅಬ್ದುಲ್ ಖಾದರ್ ಕಾವೂರು, ಮುಹಮ್ಮದ್ ಮೋನು, ಸರ್ಫರಾಝ್ ಕಾವೂರು, ಮುಹಮ್ಮದ್ ಅಶ್ರಫ್ ಎಂಡಿ, ಮುಹಮ್ಮದ್ ಮುಸ್ತಫ, ಅಬ್ದುಲ್ ರಝಾಕ್ ಹಾಜಿ ಪೇರಿಮಾರ್, ಝುಬೈರ್ ಸಖಾಫಿ ಫರಂಗಿಪೇಟೆ, ನಝೀರ್ ಪೇರಿಮಾರ್, ಇಸ್ಮಾಯೀಲ್ ಬಿ.ಕೆ. ಇವರನ್ನು ಆರಿಸಲಾಯಿತು.
ನೂತನ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಅಡ್ಯಾರ್ ಪದವು ವಂದಿಸಿದರು.