ಪುತ್ತೂರು ನಗರಸಭೆ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು
►ಪುತ್ತಿಲ ಪರಿವಾರದ ಇಬ್ಬರು ಅಭ್ಯರ್ಥಿಗಳಿಗೂ ಸೋಲು
ಪುತ್ತೂರು: ಪುತ್ತೂರು ನಗರ ಸಭೆಯಲ್ಲಿ ಸದಸ್ಯರಿಬ್ಬರ ನಿಧನದಿಂದಾಗಿ ತೆರವಾಗಿದ್ದ ವಾರ್ಡ್ 1 ಮತ್ತು ವಾರ್ಡ್ 11 ಕ್ಷೇತ್ರಕ್ಕೆ ಡಿ.27ರಂದು ನಡೆದ ಉಪಚುನಾವಣೆಯಲ್ಲಿ ವಾರ್ಡ್ 1ರಲ್ಲಿ ಕಾಂಗ್ರೆಸ್ ಹಾಗೂ ವಾರ್ಡ್ 11ರಲ್ಲಿ ಬಿಜೆಪಿ ಜಯಗಳಿಸಿದೆ.
ವಾರ್ಡ್ 1ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಸೇವಿರೆ ಅವರು ಜಯಗಳಿಸಿದ್ದು, ಪ್ರತಿಸ್ಪರ್ಧಿ ಪುತ್ತಿಲ ಪರಿವಾರದ ಪಕ್ಷೇತರ ಅಭ್ಯರ್ಥಿ ಅನ್ನಪೂರ್ಣ ಅವರನ್ನು 119 ಮತಗಳ ಅಂತರದಿಂದ ಸೋಲಿಸಿ ಗೆಲುವು ಪಡೆದುಕೊಂಡಿದ್ದಾರೆ. ದಿನೇಶ್ ಸೇವಿರೆ ಅವರಿಗೆ 427 ಮತಗಳು, ಅನ್ನಪೂರ್ಣ ಅವರಿಗೆ 308 ಮತಗಳು ಲಭಿಸಿದೆ. ಬಿಜೆಪಿಯ ಸುನೀತಾ ಅವರು 119 ಮತಗಳನ್ನು ಪಡೆದುಕೊಂಡಿದ್ದಾರೆ. 4 ಮತಗಳು ನೋಟಾಕ್ಕೆ ಬಿದ್ದಿದೆ.
ವಾರ್ಡ್ 11ರಲ್ಲಿ ಬಿಜೆಪಿ ರಮೇಶ್ ರೈ ಅವರು ಗೆಲುವು ಪಡೆದುಕೊಂಡಿದ್ದಾರೆ. ಅವರು ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ನ ದಾಮೋದರ್ ಭಂಡಾರ್ಕರ್ ಅವರನ್ನು 31 ಮತಗಳಂತರದಿಂದ ಸೋಲಿಸಿ ಗೆಲುವು ಪಡೆದುಕೊಂಡಿದ್ದಾರೆ. ರಮೇಶ್ ರೈ ಅವರಿಗೆ 431 ಮತಗಳು, ದಾಮೋದರ್ ಭಂಡಾರ್ಕರ್ ಅವರಿಗೆ 400 ಮತಗಳು ಹಾಗೂ ಪುತ್ತಿಲ ಪರಿವಾರದ ಪಕ್ಷೇತರ ಅಭ್ಯರ್ಥಿ ಚಿಂತನ್ ಅವರಿಗೆ 216 ಮತಗಳು ಲಭಿಸಿದೆ. 6 ಮತಗಳು ನೋಟಾ ಪಾಲಾಗಿದೆ