ಆಸ್ಪತ್ರೆಯಲ್ಲಿ ಸಮುದಾಯ ವಾಚನಾಲಯ ರಾಜ್ಯಕ್ಕೆ ಮಾದರಿ: ಯು.ಟಿ.ಖಾದರ್
ಮಂಗಳೂರು,ಆ.29;ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮುದಾಯ ವಾಚನಾಲಯದ ಸೇವೆ ಒದಗಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷ ರಾದ ಯು.ಟಿ.ಖಾದರ್ ತಿಳಿಸಿದ್ದಾರೆ.
ಅವರು ಇಂದು ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಮುದಾಯ ವಾಚನಾಲಯದ ಎರಡನೇ ವರ್ಷಾಚರಣೆಯ ಸಂದರ್ಭದಲ್ಲಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಏಕೈಕ ಸಮುದಾಯ ವಾಚನಾಲಯ ವೆನ್ಲಾಕ್ ಆಸ್ಪತ್ರೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಮುತುವ ರ್ಜಿವಹಿಸಿ ಆರಂಭಿಸಿರುವುದು ಶ್ಲಾಘನೀಯ ಎಂದರು.
ಆರೋಗ್ಯ ಸಚಿವನಾಗಿರುವ ಸಂದರ್ಭದಲ್ಲಿ ವೆನ್ಲಾಕ್ ಆಸ್ಪತ್ರೆಯ ಕೊರತೆ ನಿವಾರಣೆಗೆ ಸಾಕಷ್ಟು ಶ್ರಮಿಸಿರುವುದನ್ನು ಯು.ಟಿ. ಖಾದರ್ ರವರು ನೆನಪಿಸಿಕೊಂಡರು. ಲ ನೆರೆಯ ವಿವಿಧ ಜಿಲ್ಲೆಗಳಲ್ಲಿ ಆಸ್ಪತ್ರೆ ಗಳಿದ್ದರೂ ರೋಗಿಗಳು ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ಬರುತ್ತಿದ್ದಾರೆ.ಈ ಸಂದರ್ಭದಲ್ಲಿ ರೋಗಿಗಳಿಗೆ ಸರಕಾರದ ಜೊತೆ ಸಂಘ,ಸಂಸ್ಥೆಗಳು ಆಸಕ್ತಿವಹಿಸಿ ಓದುವ ಅನುಕೂಲತೆ ಒದಗಿಸುವ ಕೇಂದ್ರ ವನ್ನು ಆರಂಭಿಸಿ ರುವುದು ಶ್ಲಾಘನೀಯ. ವೆನ್ಲಾಕ್ ಆಸ್ಪತ್ರೆ ಯಾವುದೇ ಮೆಡಿಕಲ್ ಕಾಲೇಜಿಗೂ ಕಡಿಮೆ ಇಲ್ಲದ ರೀತಿ ಕಾರ್ಯ ನಿರ್ವಹಿಸುತ್ತಿದೆ.ಈ ಕೇಂದ್ರ ವನ್ನು ಇನ್ನಷ್ಟು ಸುವ್ಯವಸ್ಥಿತ ವಾಗಿಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಯು.ಟಿ.ಖಾದರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮೂಳೆ ತಜ್ಞರು ಹಾಗೂ ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್ ನ ಸಂಚಾಲಕರಾದ ಡಾ.ಕೆ.ಆರ್.ಕಾಮತ್ ಮಾತನಾಡುತ್ತಾ,ವೆನ್ಲಾಕ್ ಆಸ್ಪತ್ರೆ ಯಲ್ಲಿ ಯುವ ರೆಡ್ ಕ್ರಾಸ್ ಘಟಕ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿ ಗಳಿಗೆ ಸಮುದಾಯ ಸೇವಾ ಕೇಂದ್ರದ ಮೂಲಕ ಪ್ರತಿವಾರ ತರಬೇತಿ ನೀಡಲಾಗುತ್ತಿದೆ. ಸಮುದಾಯ ವಾಚನಾಲಯದಿಂದ ಪ್ರತಿ ತಿಂಗಳು ಸುಮಾರು 6ಸಾವಿರ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ವಿವರ ನೀಡಿದರು.
ಈ ಸಂದರ್ಭದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಜೆಸಿಂತಾ ಡಿ ಸೋಜ,ಆರ್ ಎಂಒ ಡಾ.ಸುಧಾ ಕರ್ ,ಇಂಡಿಯನ್ ರೆಡ್ ಕ್ರಾಸ್ ದಕ್ಷಿಣ ಕನ್ನಡ ಘಟಕದ ಸಭಾಪತಿ ಶಾಂತಾರಾಮ ಶೆಟ್ಟಿ, ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್ ನ ವ್ಯವಸ್ಥಾಪಕ ಸುರೇಶ್ ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಇಂಡಿಯನ್ ರೆಡ್ ಕ್ರಾಸ್ ದಕ್ಷಿಣ ಕನ್ನಡ ಘಟಕದ ಕಾರ್ಯದರ್ಶಿ ಕೆ.ಸಿ .ಹೆಗ್ಡೆ, ಇಂಡಿಯನ್ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಹಿರಿಯ ಸದಸ್ಯರಾದ ಪ್ರಭಾಕರ ಶರ್ಮಾ, ರವೀಂದ್ರನಾಥ ಉಚ್ಚಿಲ್,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಆರಿಫ್ ಪಡುಬಿದ್ರೆ,ರಾಜೇಶ್ ದಡ್ಡಂಗಡಿ ಮೊದಲಾದವರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು ಉಪಾಧ್ಯಕ್ಷ ಭಾಸ್ಕರ್ ಕಟ್ಟ ಕಾರ್ಯಕ್ರಮ ನಿರೂಪಿಸಿದರು ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ವಂದಿಸಿದರು.
ಇದೇ ಸಂದರ್ಭದಲ್ಲಿ ವೆನ್ಲಾಕ್ ಸಮುದಾಯ ವಾಚನಾಲಯದ ವ್ಯವಸ್ಥಾಪಕ ಮೊಹಮ್ಮದ್ ಅಸ್ಫ್ ಝಾನ್ ರವರನ್ನು ಸ್ಪೀಕರ್ ಯು.ಟಿ. ಖಾದರ್ ಸನ್ಮಾನಿಸಿದರು.