ಉಪ್ಪಿನಂಗಡಿ | ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅಬ್ದುಲ್ ಬಾಸಿತ್ ; ತನ್ವೀರುಲ್ ಇಸ್ಲಾಂ ಮದ್ರಸದ SKSBV ವತಿಯಿಂದ ಸನ್ಮಾನ
ಉಪ್ಪಿನಂಗಡಿ : ವಿಜ್ಞಾನ ಮಾದರಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅಬ್ದುಲ್ ಬಾಸಿತ್ ಅವರನ್ನು ಮಾಲಿಕುದ್ದೀನಾರ್ ಜುಮಾ ಮಸೀದಿ ಇದರ ಅಧೀನದಲ್ಲಿರುವ ತನ್ವೀರುಲ್ ಇಸ್ಲಾಂ ಮದ್ರಸದ SKSBV ವತಿಯಿಂದ ಸನ್ಮಾನಿಸಲಾಯಿತು.
ಅಬ್ದುಲ್ ಬಾಸಿತ್ ರಚಿಸಿದ 'ಸೀವಿಂಗ್ ಚೆಯರ್ ಫಾರ್ ಹ್ಯಾಂಡಿಕ್ಯಾಪ್ಸ್' ಎಂಬ ವಿಜ್ಞಾನ ಮಾದರಿ ಕೇಂದ್ರ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಸಚಿವಾಲಯ ನಡೆಸುವ 'ಇನ್ಸ್ಪೈರ್ ಅವಾರ್ಡ್ ಮಾನಕ್' ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಸೆಪ್ಟೆಂಬರ್ 14 ರಿಂದ 20 ರವರೆಗೆ ದಿಲ್ಲಿಯ ಕ್ಯಾಂಪಸ್ ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ವಿಜ್ಞಾನ ಮಾದರಿಯ ಪ್ರದರ್ಶನ ನಡೆಯಲಿದೆ.
ಬಾಸಿತ್ ಅವರು ಉಪ್ಪಿನಂಗಡಿಯ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇಯ ತರಗತಿ ಹಾಗೂ ತನ್ವೀರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿಯಾಗಿದ್ದಾರೆ. ಅವರು ಉಪ್ಪಿನಂಗಡಿಯ ಕಡವಿನಬಾಗಿಲು ನಿವಾಸಿ ಇಲ್ಯಾಸ್ ಪಾಶಾ ಮತ್ತು ಸಬೀಹಾ ದಂಪತಿಯ ಪುತ್ರ.
Next Story