ಸುಳ್ಯ: ಮೀಫ್ & ಎನ್ʼಲೈಟ್ ಅಕಾಡೆಮಿ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ದತಾ ಕಾರ್ಯಾಗಾರ
ಶಿಕ್ಷಣ ಮತ್ತು ಆರೋಗ್ಯ ಜೀವನದ ಅವಿಭಾಜ್ಯ ಅಂಗ :ಡಾ. ನಂದಕುಮಾರ್
ಸುಳ್ಯ: ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ಮತ್ತು ಎನ್ ಲೈಟ್ ಅಕಾಡೆಮಿ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಸುಳ್ಯ ಅನ್ಸಾರಿಯ ಕನ್ವೆನ್ಷನ್ ಸೆಂಟರ್ ನಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ದತಾ ಶಿಬಿರ ಮತ್ತು ಗಣಿತ, ವಿಜ್ಞಾನ ವಿಷಯವಾರು ತರಬೇತಿ ಕಾರ್ಯಾಗಾರ ನಡೆಯಿತು
ಮೀಫ್ ಐಎಎಸ್, ಐಪಿಎಸ್ ತರಬೇತಿ ಕಾರ್ಯಾಗಾರದ ಸಂಚಾಲಕ ಅನ್ವರ್ ಹುಸೈನ್ ಗೂಡಿನಬಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸುಳ್ಯ ತಾಲೂಕು ವೈದ್ಯಾಧಿಕಾರಿ ನಂದಕುಮಾರ್, ʼಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ತಿಳಿಯುವುದರಿಂದ ಸಮಾಜ ದಲ್ಲಿ ಉನ್ನತಿ ಸಾಧಿಸಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ರವರು ಮಾತನಾಡಿ ಜಿಲ್ಲೆಯನ್ನು ಅಗ್ರ ಸ್ಥಾನಕ್ಕೇರಿಸುವ ಪ್ರಯತ್ನಕ್ಕೆ ಸುಳ್ಯ ತಾಲೂಕಿನ ಕೊಡುಗೆಗೆ ನಿಮ್ಮೆಲ್ಲರ ಪ್ರಯತ್ನ ಅಗತ್ಯ ಎಂದರು
ಸುಳ್ಯ ತಾಲೂಕು ತಹಶೀಲ್ದಾರ್ ಮಂಜುನಾಥ್. ಜಿ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಕೆ. ಎಸ್. ಉಮ್ಮರ್, ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್ಸ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್, ಮುಸ್ಲಿಂ ಒಕ್ಕೂಟ ದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಏಲಿಮಲೆ, ಬೆಳ್ಳಾರೆ ಹಿದಾಯ ಸ್ಕೂಲ್ ನಿರ್ದೇಶಕ ಯು. ಪಿ. ಬಶೀರ್, ಉದ್ಯಮಿ ಹಮೀದ್ ಕುತ್ತಾಮೊಟ್ಟೆ, ಗ್ರೀನ್ ವ್ಯೂ ಸಂಚಾಲಕ ಎಸ್. ಎಂ. ಹಮೀದ್, ನಿಕಟ ಪೂರ್ವ ಸಂಚಾಲಕ ಮುಹಿಯದ್ದೀನ್ ಫ್ಯಾನ್ಸಿ, ಎಐಕೆಎಂಸಿಸಿ ಜಿಲ್ಹಾ ಖಜಾಂಚಿ ಇಬ್ರಾಹಿಂ ಕತ್ತರ್, ಸುಳ್ಯ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಅನ್ಸಾರಿಯ ಉಪಾಧ್ಯಕ್ಷ ಎಸ್. ಪಿ. ಅಬೂಬಕ್ಕರ್,ಬಿಇಓ ಕಚೇರಿ ಸಂಯೋಜನಾಧಿಕಾರಿ ಶ್ರೀಮತಿ ನಳಿನಿ ಕಿರ್ಲಾಯ, ಗಾಂಧಿನಗರ ಕೆ. ಪಿ. ಎಸ್ ಪ್ರಾoಶುಪಾಲರಾದ ಅಬ್ದುಲ್ ಸಮದ್ ಮೊದಲಾದವರು ಉಪಸ್ಥಿತರಿದ್ದರು.
ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಸಿರಾಜ್ ಫ್ಯಾನ್ಸಿ ವಂದಿಸಿದರು, ಆಸೀಫ್ ಕಾರ್ಯಕ್ರಮ ನಿರೂಪಿಸಿದರು. ಎನ್ʼಲೈಟ್ ಅಕಾಡೆಮಿ ಪದಾಧಿಕಾರಿಗಳಾದ ಆಶೀಕ್ ಎಸ್. ಎ, ಶಹೀದ್ ಪಾರೆ, ಮುಜೀಬ್ ಕೆ. ಬಿ.ಮಸೂದ್ (ಮಚ್ಚು) ಮೊದಲಾದವರು ಕಾರ್ಯ ಕ್ರಮದಲ್ಲಿ ಸಹಕರಿಸಿದರು.
ಪ್ರೊ. ರಾಜೇಂದ್ರ ಭಟ್ ರವರ ವಿಷಯವಾರು ಮತ್ತು ಪ್ರೇರಣಾ ಮಾತುಗಳು ವಿದ್ಯಾರ್ಥಿಗಳ ಗಮನ ಸೆಳೆಯಿತು ಸುಳ್ಯ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಂದ ಸುಮಾರು 320 ವಿದ್ಯಾರ್ಥಿಗಳು,20 ಶಿಕ್ಷಕರು ಭಾಗವಹಿಸಿದ್ದರು. ಊಟ, ಉಪಹಾರ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.