ತಲಪಾಡಿ ಕೆ.ಸಿ.ರೋಡ್ ಸಹಕಾರಿ ಸಂಘ ದರೋಡೆ ಪ್ರಕರಣ| ಮೂವರು ಆರೋಪಿಗಳ ಬಂಧನ
ಬಂದೂಕು, ತಲವಾರು ತೋರಿಸಿ ಗೋಣಿಗಳಲ್ಲಿ ಚಿನ್ನ, ಹಣ ದೋಚಿ ಪರಾರಿಯಾಗಿದ್ದ ತಂಡ

ಮಂಗಳೂರು: ಕೋಟೆಕಾರ್ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಗೆ ಕಳೆದ ಶುಕ್ರವಾರ ನುಗ್ಗಿದ ದರೋಡೆಕೋರರು ಸಿಬ್ಬಂದಿಯನ್ನು ಬೆದರಿಸಿ ದರೋಡೆಗೈದು ಪರಾರಿಯಾದವರ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಕಾರೊಂದರಲ್ಲಿ ಬಂದ ಐವರು ಮುಸುಕುಧಾರಿಗಳ ತಂಡ ಬ್ಯಾಂಕ್ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ಈ ದರೋಡೆ ನಡೆಸಿದ್ದರು.
ದರೋಡೆ ಮಾಡಿದ ನಂತರ ಆರೋಪಿಗಳು ತಮಿಳುನಾಡಿನ ತಿರುನಲ್ವೇಲಿ ತೆರಳಿದ್ದರು. ಬಂಧಿತರಿಂದ ತಲ್ವಾರ್, 2 ಪಿಸ್ತೂಲ್ ಹಾಗು ಇತರ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
Next Story