ಶಿಕ್ಷಕರು ಸಮಾಜದ ನಂಬಿಕೆಗೆ, ಗೌರವದ ಸ್ಥಾನಮಾನಕ್ಕೆ ಪಾತ್ರರಾಗಿದ್ದರು: ಬಿ.ರಮಾನಾಥ ರೈ
ಭಂಡಾರಿ ಫೌಂಡೇಶನ್ ವತಿಯಿಂದ ಶಿಕ್ಷಕರ ದಿನಾಚರಣೆ, ಗುರುವಂದನೆ
ಮಂಗಳೂರು: ಶಿಕ್ಷಕರು ಸಮಾಜದಲ್ಲಿ ನಂಬಿಕೆಗೆ ಅತ್ಯಂತ ಹೆಚ್ಚು ಗೌರವದ ಸ್ಥಾನ ಮಾನಕ್ಕೆ ಅರ್ಹರಾಗಿದ್ದರು ಆ ಸ್ಥಾನ ಮಾನ ಉಳಿಯುವಂತಾಗಲಿ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಅವರು ಗುರುವಾರ ಅಡ್ಯಾರ್ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಭಂಡಾರಿ ಫೌಂಡೇಶನ್ ನ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಕ ವೃತ್ತಿ ಎಂದರೆ ಸಂನ್ಯಾಸ ಸ್ವೀಕಾರದಂತೆ ಸಮಾಜಕ್ಕೆ ಧಾರೆ ಯೆರೆಯುವ ಕೆಲಸದಲ್ಲಿ ತೊಡಗಿಸಿ ಕೊಳ್ಳುತ್ತಾರೆ. ಒಬ್ಬ ಸ್ಫೂರ್ತಿದಾಯಕ ಶಿಕ್ಷಕನ ಮೂಲಕ ಆ ಶಾಲೆಯಲ್ಲಿ ಕಲಿತ. ವಿದ್ಯಾರ್ಥಿಗಳು ರಾಜ್ಯ ಮಟ್ಟದ ಲ್ಲಿ ಪ್ರತಿನಿಧಿ ಸಿದ ಉದಾಹರಣೆ ಇದೆ.ಗುರುವಂದನಾ ಕಾರ್ಯಕ್ರಮ ನನ್ನ ಬಾಲ್ಯದ ದಿನಗಳನ್ನು ಗುರುಗಳನ್ನು ನೆನ ಪಿಸಿಕೊಳ್ಳಲು ಅವಕಾಶ ವಾಯಿತು, ನನ್ನ ತಾಯಿ, ತಂದೆಯವರಿಗೆ ಗುರುಗಳ ಬಗ್ಗೆ ಹೆಚ್ಚು ಗೌರವ ಇತ್ತು,ಬಾಲ್ಯದಲ್ಲಿ ದೊರೆತ ಉತ್ತಮ ಶಿಕ್ಷಕರು ತಮ್ಮ ಶಿಸ್ತು ಬದ್ಧತೆಯಿಂದ ನಮ್ಮ ಬದುಕಿನಲ್ಲಿ ಅತ್ಯಂತ ಹೆಚ್ಚು ಪ್ರಭಾವ ಬೀರಿದ್ದರು.ಬದುಕಿನಲ್ಲಿ ತಂದೆ,ತಾಯಿಯಂತೆ ಗುರುಗಳು ಶಿಕ್ಷಣ ನೀಡಿದ ಶಿಕ್ಷಕರು ಸೇರಿದಂತೆ ಮಹತ್ವದ ಸ್ಥಾನ ಪಡೆದಿದ್ದಾರೆ. ನಾನು ಕಲಿತ ಬೆಂಜನ ಪದವು ಶಾಲೆಗೆ ಸಮುದಾಯ ಭವನ ನಿರ್ಮಾಣ, ಕ್ರೀಡಾಂಗಣ ಕೆಲಸ ಆರಂಭಿಸಿದ್ದೆ ಅದನ್ನು ಪೂರ್ಣ ಗೊಳಿಸಬೇಕೆನ್ನುವ ಕನಸಿದೆ.ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವುದು ಉತ್ತಮ ಯೋಜನೆ ಅದಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡುತ್ತಾ, ಗುರುಗಳಿಗೆ ಸಮಾಜದಲ್ಲಿ ತಂದೆ ತಾಯಿಗಳಿಗೆ ಇರುವ ಅತ್ಯಂತ ಎತ್ತರದ ಸ್ಥಾನವಿದೆ. ಬಾಲ್ಯದಲ್ಲಿ ಸಹಪಾಠಿ ಗಳ ಬಹಳ ವರ್ಷ ಗಳ ನಂತರ ಒಂದು ಕಡೆ ಸಿಕ್ಕಾಗ ಬಹಳ ಸಂತೋ ಷ ವಾಗುತ್ತದೆ.ಅಂತಹ ಅವಕಾಶ ಇಂದು ದೊರೆತಿದೆ ಎಂದು ತನಗೆ ಕಲಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಅಡ್ಯಾರ್ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮಂಜುನಾಥ ಭಂಡಾರಿಯವರು ಮಾತನಾಡುತ್ತಾ, ನನ್ನ ಬದುಕಿನಲ್ಲಿ ಹೆಚ್ಚು ಪ್ರಭಾವ ಬೀರಿದ ಮತ್ತು ಬದುಕನ್ನು ರೂಪಿಸಲು ಕಾರಣ ಕರ್ತರಾದ ಶಿಕ್ಷಕರನ್ನು ಶಿಕ್ಷಕರ ದಿನಾಚರಣೆಯ ಸಂದರ್ಭ ಗೌರವಿಸಬೇಕೆನ್ನುವ ಹಿನ್ನೆಲೆಯಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಬಾಲ್ಯದ ಸಹಪಾಠಿಗಳನ್ನು ಹಮ್ಮಿಕೊಂಡಿರುವು ದಾಗಿ ತಿಳಿಸಿದ್ದಾರೆ. ಬೆಂಗ್ರೆಯ ಸರಕಾರಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅದನ್ನು ಮಾದರಿ ಶಾಲೆಯಾಗಿ ಅಭಿವೃದ್ಧಿ ಪಡಿಸುವ ಇಚ್ಛೆ ಇದೆ ಎಂದರು.
ಸಮಾರಂಭದಲ್ಲಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲ ಡಾ.ಎಸ್ .ಎಸ್. ಇಂಜನ ಗೇರಿ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕರಾದ ಲೂಸಿ ಕಾನ್ಸೆಪ್ಟಾ ಕೊಯೆಲ್ಲೋ, ಸದಾನಂದ ಬಿ.ಎಚ್, ಅನಂತ ರಾಮ ಹೇರಳೆ, ಭಗವಾನ್ ದಾಸ್ , ಮಹಾಬಲ ಆಳ್ವಾರನ್ನು ಸನ್ಮಾನಿಸಲಾಯಿತು. ಸ್ಮಿತಾ ಶೆಣೈ, ಅಕ್ಷಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.