ತಾಜುಲ್ ಉಲಮಾ ಉರೂಸ್ ಪ್ರಯುಕ್ತ ಉಳ್ಳಾಲ ಮೊಹಲ್ಲಾ ಸಮಿತಿಯಿಂದ ಸಮಾಲೋಚನಾ ಸಭೆ
ಉಳ್ಳಾಲ: ತಾಜುಲ್ ಉಲಮಾ ತಂಙಳ್ ಉಳ್ಳಾಲದಲ್ಲಿ ಬಹಳಷ್ಟು ವರ್ಷ ಇದ್ದುಕೊಂಡು ಧಾರ್ಮಿಕ ಶಿಕ್ಷಣ ಕ್ಕೆ ಒತ್ತು ಕೊಟ್ಟು ಕೆಲಸ ಮಾಡಿದವರು. ಅವರ ಉರೂಸ್ ಕಾರ್ಯಕ್ರಮ ದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಉಳ್ಳಾಲ ಖಾಝಿ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಹೇಳಿದರು.
ಅವರು ತಾಜುಲ್ ಉಲಮಾ ಅಸಯ್ಯಿದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ಅವರ ಉರೂಸ್ ಪ್ರಯುಕ್ತ ಉಳ್ಳಾಲ ದರ್ಗಾ ಹಾಲ್ ನಲ್ಲಿ ಗುರುವಾರ ನಡೆದ ಉಳ್ಳಾಲ ಜಮಾಅತಿನ 28 ಮೊಹಲ್ಲಾ ಸಮಿತಿ ಯ ಸಮಾಲೋಚನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಕಾರ್ಯಕ್ರಮ ವನ್ನು ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿಖತೀಬ್ ಇಬ್ರಾಹಿಂ ಸ ಅದಿ ಉದ್ಘಾಟಿಸಿ ತಾಜುಲ್ ಉಲಮಾ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಮಾಡಿದ ಸೇವೆ ಬಗ್ಗೆ ವಿವರಿಸಿದರು.
ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಹಸೈನಾರ್ ಕೋಟೆಪುರ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಿಹಾಬುದ್ದೀನ್ ಸಖಾಫಿ, ಜೊತೆ ಕಾರ್ಯದರ್ಶಿ ಇಸಾಕ್ ಮೇಲಂಗಡಿ, ಮುಸ್ತಫಾ ಮದನಿ ನಗರ, ಕೋಶಾಧಿಕಾರಿ ನಾಝಿಮ್ ರಹ್ಮಾನ್ ಮುಕಚೇರಿ, ಲೆಕ್ಕ ಪರಿಶೋಧಕ ಫಾರೂಕ್ ಯು.ಎಚ್. ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಿಹಾಬುದ್ದೀನ್ ಸಖಾಫಿ, ಸ್ವಾಗತಿಸಿದರು