ವಿಟ್ಲ: ಕರ್ನಾಟಕ ಬ್ಯಾಂಕ್ ದರೋಡೆ ಪ್ರಕರಣ; ಮೂವರು ಆರೋಪಿಗಳ ಬಂಧನ
ರಫೀಕ್ ಖಲಂದರ್ ದಯಾನಂದ
ವಿಟ್ಲ: ಕರ್ನಾಟಕ ಬ್ಯಾಂಕ್ ಕಿಟಕಿ ಮೂಲಕ ಒಳ ನುಸುಳಿ ಕೋಟ್ಯಾಂತರ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ ನಾಲ್ಕು ಮಂದಿ ಆರೋಪಿಗಳ ಪೈಕಿ ಮೂವರನ್ನು ಸೋಮವಾರ ಅಡ್ಯನಡ್ಕ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಕಾಸರಗೋಡು ಮೂಲದ ಖಲಂದರ್, ರಫೀಕ್, ಬಾಯಾರು ಮೂಲದ ದಯಾನಂದ ಎಂದು ಗುರುತಿಸಲಾಗಿದೆ. ಈ ಮೂವರು ಕಳ್ಳತನದ ಪ್ರಮುಖ ರುವಾರಿಗಳು ಎನ್ನಲಾಗಿದೆ.ಫೆ.28 ರಂದು ಈ ಆರೋಪಿಗಳನ್ನು ಪೊಲಿಸರು ವಶಕ್ಕೆ ಪಡೆದಿದ್ದ ಪೊಲೀಸರು, ಮಾರ್ಚ್ 10 ರಂದು ಸ್ಥಳ ಮಹಜರಿಗೆ ಕರೆದುಕೊಂಡು ಬಂದಿದ್ದ ವೇಳೆ ಅಧಿಕೃತವಾಗಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೀಝಾ ಕಾರಿನ ಮೂಲಕ ಆಗಮಿಸಿದ ಕಳ್ಳರು ಬ್ಯಾಂಕ್ ಕಿಟಕಿಯ ಸರಳು ತುಂಡರಿಸಿ, ಗ್ಯಾಸ್ ಕಟ್ಟರ್ ಮೂಲಕ ಸೇಫ್ ಲಾಕರ್ ಬಾಗಿಲನ್ನು ತೆರೆದು ಲಾಕರ್ ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ದೋಚಿದ್ದರು. ಆ ಬಳಿಕ ನಾಲ್ಕು ಪಾಲು ಮಾಡಿಕೊಂಡ ಕಳ್ಳರು ಒಂದು ಪಾಲನ್ನು ಬಾಯಾರಿನ ಪೊಸಡಿ ಗುಂಪೆ ಗುಡ್ಡದ ತಪ್ಪಲಿನ ಸಂಜಂಕಿಲ ಸಮೀಪ ನಿರ್ಜನ ಪ್ರದೇಶದಲ್ಲಿರುವ ಆಟದ ಮೈದಾನವೊಂದರಲ್ಲಿ ಇದನ್ನು ಅಡಗಸಿಟ್ಟಿರುವುದಾಗಿ ವಿಚಾರಣೆ ವೇಳೆ ಬಹಿರಂಗ ಪಡಿಸಿದ್ದರು.
ಕೆಲವು ವರ್ಷಗಳಿಂದ ವೆಲ್ಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಸೇಫ್ ಲಾಕರ್ ಅನ್ನು ತುಂಡರಿಸಲು ಸಹಕರಿಸಿದ್ದು, ಆರೋಪಿಗಳು ಕಾಸರಗೋಡು ಮೂಲದ ವಿವಿಧ ಪ್ರಕರಣದಲ್ಲಿ ಆರೋಪಿಗಳಾಗಿರುವವರು ಎಂದು ತನಿಖೆಯಿಂದ ತಿಳಿದು ಬಂದಿದೆ.