ಮಂಗಳೂರು: ಡಿ. 16ರಂದು ವಿವಿಧೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ
ಸಾಂದರ್ಭಿಕ ಚಿತ್ರ
ಮಂಗಳೂರು: ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರದಿಂದ ಮಂಗಳೂರು ನಗರಕ್ಕೆ ಪೂರೈಕೆಯಾಗುವ ರೇಚಕ ಸ್ಥಾವರದಲ್ಲಿ ಮೆಸ್ಕಾಂನವರ ತುರ್ತು ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಡಿ. 16ರಂದು ವಿವಿಧ ಕಡೆ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಪಾಲಿಕೆ ಪ್ರಕಟನೆ ತಿಳಿಸಿದೆ.
ಆ ದಿನ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಪಡೀಲ್, ಮರೋಳಿ, ಕಂಕನಾಡಿ, ಮಂಗಳಾದೇವಿ, ಜೆಪ್ಪು, ಫಳ್ನೀರ್, ಮುಳಿಹಿತ್ಲು, ಕಾರ್ಸ್ಟ್ರೀಟ್, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್ಬ್ಯಾಂಕ್, ಶಕ್ತಿನಗರ, ಕಣ್ಣೂರು, ಬಜಾಲ್, ಜಪ್ಪಿನಮೊಗರು, ಅಳಪೆ, ಅತ್ತಾವರ, ಉಲ್ಲಾಸ್ನಗರ, ಚಿಲಿಂಬಿ, ಕೋಡಿಕಲಂ, ಉರ್ವಾಸ್ಟೋರ್, ಅಶೋಕನಗರ, ಕುಡುಪು, ವಾಮಂಜೂರು, ಬೊಂದೇಲ್, ಕಾವೂರು ಹಾಗೂ ಮರಕಡ ಭಾಗಶ: ಇತ್ಯಾದಿ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುವುದು. ಹೀಗಾಗಿ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ ಎಂದು ಪಾಲಿಕೆ ಪ್ರಕಟನೆಯಲ್ಲಿ ತಿಳಿಸಿದೆ.
Next Story