ಮಂಗಳೂರು: ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಟ್ ಆಫ್ ಟೆಕ್ನಾಲಜಿ(ಬಿಐಟಿ)ಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗ, ಐಇಇಇ (IEEE BIT) ಬಿಐಟಿ ವಿದ್ಯಾರ್ಥಿ ಘಟಕ ಮತ್ತು ಐಇಇಇ ಬೆಂಗಳೂರು ವಿಭಾಗದ ಸಹಯೋಗದೊಂದಿಗೆ "ಮಾಸ್ಟರಿಂಗ್ ಡೇಟಾ ಮತ್ತು ಮೆಷಿನ್ ಲರ್ನಿಂಗ್ ಪ್ರೊಸೆಸಸ್ ವಿದ್ ರಾಪಿಡ್ ಮೈನರ್ (Mastering Data and Machine Learning Processes with RapidMiner) ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಾಗಾರವನ್ನು ಆಯೋಜಿಸಿತ್ತು.
ಬಿಐಟಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ ಸ್ವಾಗತ ದೊಂದಿಗೆ ಕಾರ್ಯಾಗಾರ ಪ್ರಾರಂಭವಾಗಿದ್ದು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಡೇಟಾ ಅನಾಲಿಟಿಕ್ಸ್ ಮತ್ತು ಯಾಂತ್ರೀಕೃತ ಕಲಿಕೆಯ ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚಿಸುವ ಪ್ರಾಮುಖ್ಯತೆ ಬಗ್ಗೆ ಅವರು ಬೆಳಕು ಚೆಲ್ಲಿದರು.
ಕಾರ್ಯಗಾರದಲ್ಲಿ ಎಂಐಟಿ ಮಣಿಪಾಲದ ಸಹಾಯಕ ಪ್ರಾಧ್ಯಾಪಕ ಡಾ.ರಾಘವೇಂದ್ರ ಎಸ್ ಅವರು RapidMiner ಅನ್ನು ಬಳಸಿಕೊಂಡು ವರ್ಗೀಕರಣ ಕಾರ್ಯ ಮತ್ತು ರಿಗ್ರೆಶನ್ ಟಾಸ್ಕ್ ಸೇರಿದಂತೆ ಕೇಸ್ ಸ್ಟಡಿಗಳ ಬಗ್ಗೆ ಮಾಹಿತಿ ನೀಡಿದರು. ಇದಲ್ಲದೆ ಡೇಟಾ ಸಂಸ್ಕರಣೆ, ಮಾದರಿ ನಿರ್ಮಾಣದ ಬಗ್ಗೆಯೂ ಮಾಹಿತಿಯನ್ನು ಹಂಚಿಕೊಂಡರು.
ಪ್ರಶ್ನೋತ್ತರ ಅವಧಿಯೊಂದಿಗೆ ಕಾರ್ಯಗಾರ ಮುಕ್ತಾಯಗೊಂಡಿತು. ಗಣಕ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಸಿನಾನ್ ಧನ್ಯವಾದ ಸಲ್ಲಿಸಿದರು.