ದಾವಣಗೆರೆ: ಲೋಕಾಯುಕ್ತ ಬಲೆಗೆ ಬಿದ್ದ ಪೌರಾಯುಕ್ತ
ದಾವಣಗೆರೆ: ಬಿಲ್ ಮಂಜೂರು ಮಾಡಲು 2 ಲಕ್ಷ ಹಣ ಪಡೆಯುವ ವೇಳೆ ಹರಿಹರ ನಗರಸಭೆ ಪೌರಾಯುಕ್ತ ಬಸವರಾಜ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕರಿಬಸಪ್ಪ ಎಂಬವವರು ನಗರಸಭೆ ವ್ಯಾಪ್ತಿಯ ವಾಟರ್ ಸಪ್ಲೈಗಳಿಗೆ ಸಾಮಾನು ಸರಬರಾಜು ಮಾಡಿದ್ದರು. ಅದರಂತೆ ನಗರಸಭೆಯಿಂದ 25-30 ಲಕ್ಷ ಹಣ ಬಾಕಿ ಇದ್ದು, ಇದನ್ನು ಮಂಜೂರು ಮಾಡಿಕೊಡಲು ಪೌರಾಯುಕ್ತ ಬಸವರಾಜ 2 ಲಕ್ಷ ಹಣಕ್ಕೆ ಬೇಡಿಕೆಯಿರಿಸಿದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು. ಹರಿಹರೇಶ್ವರ ಬಡಾವಣೆಯಲ್ಲಿರುವ ತಮ್ಮ ರೂಮಿನಲ್ಲಿ ಹಣ ಪಡೆಯುವಾಗ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ ಹಾಗೂ ಉಪಾಧೀಕ್ಷಕಿ ಕಲಾವತಿ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು ಸೂರಿನ್, ಮಧುಸೂಧನ್, ಹೆಚ್.ಎಸ್.ರಾಷ್ಟ್ರಪತಿ ಹಾಗೂ ಸಿಬ್ಬಂದಿಗಳಾದ ಅಂಜನೇಯ್, ವೀರೇಶಯ್ಯ, ಸುಂದರೇಶ್, ಮಲ್ಲಿಕಾರ್ಜುನ್, ಲಿಂಗೇಶ್, ಧನರಾಜ್, ಮಂಜುನಾಥ, ಗಿರೀಶ್, ಕೋಟಿನಾಯ್ಕ್, ಬಸವರಾಜ್, ಮೋಹನ್, ಕೃಷ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.