28 ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮ ಗುರಿ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ
ʼಜಾತಿ ಗಣತಿ ಬೇಡ ಬದಲಾಗಿ ವೈಜ್ಞಾನಿಕ ಸಮೀಕ್ಷೆ ಆಗಬೇಕುʼ
ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಪರ ಒಳ್ಳೆಯ ವಾತಾವರಣ ಇದ್ದು, ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಕಾರ್ಯಕರ್ತರು ಖುಷಿಯಾಗಿದ್ದಾರೆ. 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮ ಗುರಿ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಹಿಜಾಬ್ ವಿಚಾರದಲ್ಲಿ ನಮ್ಮೆಲ್ಲರ ಆಕ್ರೋಶದ ಹಿನ್ನೆಲೆ ಸಿದ್ದರಾಮಯ್ಯ ಅವರು ಹೇಳಿಕೆ ಹಿಂಪಡೆದಿದ್ದಾರೆ. ನಾವು ಅಲ್ಪ ಸಂಖ್ಯಾತರ ವಿರೋಧಿಗಳಲ್ಲ. ಜಾತಿಯ ವಿಷಬೀಜ ಬಿತ್ತುವ ಕೆಲಸ ಸಿದ್ದರಾಮಯ್ಯ ಬಿಡಬೇಕು. ಅದರಿಂದ ಅವರಿಗೆ ಯಾವುದೇ ಲಾಭ ಆಗಲ್ಲ ಎಂದರು.
ʼಜಾತಿ ಗಣತಿ ಬೇಡ ಬದಲಾಗಿ ವೈಜ್ಞಾನಿಕವಾಗಿ ಸಮೀಕ್ಷೆ ಆಗಬೇಕು ಎಂಬ ಭಾವನೆ ಇದೆ. ನಾವು ಕೂಡಾ ಅದನ್ನೆ ಹೇಳುತ್ತೇವೆ. ಇನ್ನೊಮ್ಮೆ ಗಣತಿ ಆಗಲಿʼ ಎಂದು ಹೇಳಿದರು.
ರಾಜ್ಯ ಬಿಜೆಪಿಯ ಪದಾಧಿಕಾರಿಗಳ ಪಟ್ಟಿಯನ್ನು ಅಳೆದು ತೂಗಿ ಬಿಡುಗಡೆ ಮಾಡಲಾಗಿದ್ದು, ಒಳ್ಳೆಯ ಪದಾಧಿಕಾರಿಗಳ ಆಯ್ಕೆ ಆಗಿದೆ ಎಂದು ತಿಳಿಸಿದರು. ಯತ್ನಾಳ ಬಗ್ಗೆ ಏನು ಹೇಳಲ್ಲ ಅವರ ವಿರುದ್ದ ಹೈಕಮಾಂಡ್ ಗೆ ದೂರು ನೀಡುವ ಪ್ರಯತ್ನವೂ ಸಹ ಮಾಡಲ್ಲ, ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದ್ದಾರೆ.