ಅಬ್ದುಲ್ ಖಾದರ್ ಹಾಜಿ ನಿಧನ
ಮಂಗಳೂರು : ಮೂಲತಃ ಬೆಳ್ಮ ಗ್ರಾಮದ ಕಲ್ಪಾದೆಯ ಪ್ರಸುತ್ತ ನಾಟೆಕಲ್ ಸಮೀಪದ ಉರುಮನೆ-ವಿಜಯನಗರದ ನಿವಾಸಿ ಅಬ್ದುಲ್ ಖಾದರ್ ಹಾಜಿ ಯಾನೆ ಪೊಡಿಯಬ್ಬ (67) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು ಮತ್ತು ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಪುತ್ತೂರು ಹಾಗೂ ನಾಟೆಕಲ್ ಪರಿಸರದಲ್ಲಿ ಚಪ್ಪಲಿ ಅಂಗಡಿ ವ್ಯಾಪಾರಿಯಾಗಿದ್ದರು. ಬೆಳ್ಮ ಕಲ್ಪಾದೆ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದ ಇವರು ಅನೇಕ ಸಂಘ ಸಂಸ್ಥೆಗಳಿಲ್ಲಿ ಸಕ್ರಿಯರಾಗಿದ್ದರು.
Next Story