ಅಣ್ಣು ಸಿ ಪದ್ಮುಂಜ ನಿಧನ
ಮಂಗಳೂರು, ಸೆ.5: ಕಮ್ಯೂನಿಸ್ಟ್ ಅಣ್ಣು ಎಂದೇ ಪ್ರಸಿದ್ಧಿ ಪಡೆದಿದ್ದ ಅಣ್ಣು ಸಿ ಪದ್ಮುಂಜ ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಮೃತರು ಪತ್ನಿ ವಿಮಲರನ್ನು ಅಗಲಿದ್ದಾರೆ.
ಮೃತ ಅಣ್ಣು ಅವರು 1996 ರಿಂದ ನಿರಂತರವಾಗಿ ಬೆಳ್ತಂಗಡಿ ತಾಲೂಕು ಸಿಪಿಎಂ ಪಕ್ಷದ ಸಂಪರ್ಕದಲ್ಲಿದ್ದು, ಅದಕ್ಕೂ ಮೊದಲು ಪುತ್ತೂರು ತಾಲೂಕಿನ ಪಕ್ಷದ ಸಂಪರ್ಕದಲ್ಲಿದ್ದು ತಾಲೂಕು,ಜಿಲ್ಲಾ ಪಂಚಾಯತು ಚುನಾವಣೆಯಲ್ಲೂ ಅವರು ಪಕ್ಷದ ಅಭ್ಯರ್ಥಿಯಾಗಿ ಸರ್ಧಿಸಿದ್ದರು. ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಅವರು ಪಕ್ಷಕ್ಕಾಗಿ ಪ್ರಾಮಾಣಿಕ, ನಿಸ್ವಾರ್ಥ ಸೇವೆ ಸಲ್ಲಿಸಿ ದ್ದಾರೆ. ಅವರ ಪಕ್ಷದ ನಿಷ್ಟೆ, ಸೇವೆಗಳನ್ನು ಸ್ಮರಿಸುತ್ತಾ ಸಿಪಿಎಂ ಪಕ್ಷವು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತದೆ ಎಂದು ಮೃತರ ಮನೆಗೆ ಭೇಟಿ ನೀಡಿದ ಸಿಪಿಎಂ ಮುಖಂಡ ಬಿ.ಎಂ.ಭಟ್ ತಿಳಿಸಿದ್ದಾರೆ.
Next Story