ಸಿ. ಕೆ.ಮಂಜರ್ ನಿಧನ
ಉಡುಪಿ, ಆ.22: ನಿಟ್ಟೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 27 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಎಲ್ಲ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕರೆನಿಸಿದ್ದ ಸಿ.ಕೆ.ಮಂಜರ್ (92) ರವಿವಾರ ರಾತ್ರಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಶಿಷ್ಯರನ್ನು ಅಗಲಿದ್ದಾರೆ.
ನಿಟ್ಟೂರು ಎಜುಕೇಶನಲ್ ಸೊಸೈಟಿಯನ್ನು ಸ್ಥಾಪಿಸಿ, ಪ್ರೌಢಶಾಲೆಯನ್ನು ಆರಂಭಿಸುವಲ್ಲಿ ಎಫ್.ಎಕ್ಸ್.ಕರ್ನೆಲಿಯೋ, ಸದಾಶಿವ ಶೆಟ್ಟಿ ಹಾಗೂ ಮಂಜರ್ ಮಾಸ್ಟರ್ರ ಪರಿಶ್ರಮ ಸದಾ ಸ್ಮರಣೀಯ. ಅವರ ನಿಧನಕ್ಕೆ ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕವೃಂದ ಮತ್ತು ಉಭಯ ಶಾಲೆಗಳ ಹಳೆ ವಿದ್ಯಾರ್ಥಿ ಸಂಘಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.
Next Story