ಡಾ. ಉಪೇಂದ್ರ ಪೆರ್ಣಂಕಿಲ ನಿಧನ
ಮಂಗಳೂರು: ಮಂಗಳೂರು ಆರ್‌ಎಸ್‌ಬಿ ಸಂಘದ ಮಾಜಿ ಅಧ್ಯಕ್ಷ, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ ಪ್ರೊ. ಉಪೇಂದ್ರ ಪೆರ್ಣಂಕಿಲ(78) ಅವರು ಶನಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.
ಕುಲಶೇಖರ ನಿವಾಸಿಯಾಗಿದ್ದ ಇವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಉತ್ತಮ ಶೈಕ್ಷಣಿಕ ಸಾಧನೆಗೈದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಿಂದ ಹಿಡಿದು ಪ್ರಾಧ್ಯಾಪಕ ವೃತ್ತಿಯವರೆಗೆ ಉತ್ತಮ ಸಾಧಕರಾಗಿದ್ದವು. ಮಾತ್ರವಲ್ಲದೆ ಜ್ಯೋತಿಷ್ಯ ಮತ್ತು ಆಯುರ್ವೇದದ ಜ್ಞಾನ ಹೊಂದಿದ್ದರು. ಹಲವು ಗೋಶಾಲೆ, ದೇವಸ್ಥಾನಗಳ ಜೀರ್ಣೋದ್ಧಾರ, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಪರೋಪಕಾರಿಯಾಗಿದ್ದರು.
Next Story