ಜಿ. ಹುಸೈನ್ ಬಾವ ರೆಡೆಕ್ ನಿಧನ
ಮಂಗಳೂರು, ಸೆ.20: ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿ ಜಿ.ಹುಸೈನ್ ಬಾವ ರೆಡೆಕ್ (70) ಹೃದಯಾಘಾತದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಪಣಂಬೂರು ಮುಸ್ಲಿಮ್ ಜಮಾಅತ್ ಜುಮಾ ಮಸೀದಿಯ ಆಡಳಿತ ಸಮಿತಿಯ ಸದಸ್ಯರಾಗಿದ್ದ ಇವರು, ನೂರುಲ್ ಹುದಾ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿಯಾಗಿದ್ದರು. ಪಡಿತರ ಅಂಗಡಿ ನಡೆಸುತ್ತಿದ್ದ ಅವರು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಗುರುವಾರ ಸುಬ್‌ಹಿ ನಮಾಝ್ ಬಳಿಕ ಕಾಟಿಪಳ್ಳ ಮುಹಿಯುದ್ದೀನ್ ಜುಮಾ ಮಸೀದಿಯ ದಫನ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story