ಗೋಪಾಲ ಕೃಷ್ಣ
ಮಲ್ಪೆ, ಜು.1: ಮಲ್ಪೆನಿವಾಸಿ ಕಿದಿಯೂರು ಗೋಪಾಲ್ ಕೃಷ್ಣ ಭಂಡಾರ್ ಕಾರ್(95) ಜೂ.28ರಂದು ನಿಧನರಾದರು.
ಸುಮಾರು 50 ವರ್ಷಗಳಿಂದ ಪತ್ರಿಕಾ ವಿತರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ತಮ್ಮ 90ನೇ ವರ್ಷದಲ್ಲಿ ಸೈಕಲ್‌ನಲ್ಲಿ ಮನೆ ಮನೆಗೆ ಪತ್ರಿಕೆ ಹಾಕಿ ಜನ ಸಾಮಾನ್ಯರ ಪ್ರೀತಿಗೆ ಪಾತ್ರರಾಗಿದ್ದರು. ಕಿದಿಯೂರು ಭಂಡಾರ್‌ಕಾರ್ ಫ್ಯಾಮಿಲಿ ಟ್ರಸ್ಟ್‌ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಇವರು, ಮಲ್ಪೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿದ್ದರು. ಮಲ್ಪೆ ಜಿಎಸ್‌ಬಿ ರಾಮ ಮಂದಿರದ ಸಕ್ರೀಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story