ಹಾಜಿ ಕೆ.ಎಸ್.ಸಾವುಂಞಿ ಅರಫಾ ನಿಧನ
ಹಾಜಿ ಕೆ.ಎಸ್.ಸಾವುಂಞಿ ಅರಫಾ
ಬಂಟ್ವಾಳ: ತುಂಬೆ ಗ್ರಾಮದ ಅರಬನ ವಳವೂರು ನಿವಾಸಿ, ಅರಫಾ ಗ್ರೂಪ್ ಇದರ ಸಂಸ್ಥಾಪಕ ಹಾಜಿ ಕೆ.ಎಸ್.ಸಾವುಂಞಿ ಅರಫಾ (87) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸಂಜೆ ನಿಧನರಾದರು.
ಅರಫಾ ಗ್ರೂಪ್ ಸಂಸ್ಥಾಪಕರಾದ ಮೃತರು, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ವಳವೂರು ಅರಬನ ಕಿಲ್ಲ್ ರ್ ಮಸೀದಿ, ವಳವೂರು ಜುಮಾ ಮಸೀದಿಯಲ್ಲಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಗುರುವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 9 ಪುತ್ರರು, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಂತಿಮ ದರ್ಶನಕ್ಕೆ ವಳವೂರು ಅರಬನ ಅವರ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಾಳೆ (ಶುಕ್ರವಾರ) ಜುಮಾ ನಮಾಝ್ ಗೆ ಮೊದಲು ವಳವೂರು ಜುಮಾ ಮಸೀದಿಯ ಖಬರ್ ಸ್ಥಾನದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
Next Story