ಇಸ್ಮಾಯಿಲ್ ಹಾಜಿ ನಿಧನ
ಪುತ್ತೂರು: ತಾಲೂಕಿನ ಕೆಮ್ಮಿಂಜೆ ಗ್ರಾಮದ ಬೆದ್ರಾಳ ಎಂಬಲ್ಲಿನ ನಿವಾಸಿ ಹಿರಿಯ ಉದ್ಯಮಿ ಎಸ್. ಇಸ್ಮಾಯಿಲ್ ಹಾಜಿ(ಶಿಬರ ಮೋನುಚ್ಚ)(84) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಬೆದ್ರಾಳದ ಸ್ವಗೃಹದಲ್ಲಿ ನಿಧನರಾದರು.
ಹಲವಾರು ವರ್ಷಗಳ ಕಾಲ ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇಸ್ಮಾಯಿಲ್ ಹಾಜಿ ಅವರು ಸಮುದಾಯ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದರು.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯ ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ಧಫನ ಭೂಮಿಯಲ್ಲಿ ನಡೆಸಲಾಯಿತು.
Next Story