ಮೂಡುಬಿದಿರೆ: ಕೆ.ಎಂ. ಫಝ್ಲುಲ್ಲಾ ನಿಧನ
ಮೂಡುಬಿದಿರೆ, ಸೆ 29 : ಕೋಟೆಬಾಗಿಲು ನಿವಾಸಿ ಕೆ.ಎಂ. ಫಝ್ಲುಲ್ಲಾ(78) ಅವರು ಶುಕ್ರವಾರ ಮುಂಜಾನೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಕೆಲವು ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದರು.
ಮೂಡುಬಿದಿರೆಯ ಮುಖ್ಯ ರಸ್ತೆಯಲ್ಲಿರುವ ಫ್ಯಾನ್ಸಿ ಫುಟ್ ವೇರ್ ಹಾಗು ಶೂ ಟ್ರ್ಯಾಕ್ ಹೆಸರಿನ ಪಾದರಕ್ಷೆ ಮಳಿಗೆಗಳ ಮಾಲಕರಾದ ಫಜ್ಲುಲ್ಲಾ ಅವರು ನಗುಮುಖದ ಸೇವೆಯ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಕೋಟೆಬಾಗಿಲು ಮಸೀದಿ ಸಹಿತ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗು ನಾಲ್ಕು ಗಂಡು ಮಕ್ಕಳ ಸಹಿತ ಬಂಧು ಬಳಗವನ್ನು ಅಗಲಿದ್ದಾರೆ.
Next Story