ಮುಹ್ಯಿದ್ದೀನ್ ಕುಟ್ಟಿ ಹಾಜಿ ಪಾಪ್ಲಿ ನಿಧನ
ಪುತ್ತೂರು: ಪುತ್ತೂರು ನಗರದ ಹೊರವಲಯದ ಬನ್ನೂರು ನಿವಾಸಿ ಮುಹ್ಯಿದ್ದೀನ್ ಕುಟ್ಟಿ ಹಾಜಿ ಪಾಪ್ಲಿ (79) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು.
ಬನ್ನೂರು ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದ ಅವರು ಧಾರ್ಮಿಕ ಮುಖಂಡರಾಗಿ ಹಲವಾರು ಕೆಲಸ ಕಾರ್ಯ ಗಳನ್ನು ಮಾಡಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯ ರವಿವಾರ ಬೆಳಗ್ಗೆ ಬನ್ನೂರು ಜುಮ್ಮಾ ಮಸೀದಿ ಧಫನ ಭೂಮಿಯಲ್ಲಿ ನಡೆಯಿತು.
Next Story