ರಾಮಚಂದ್ರ ಜಿ. ನಾಯ್ಕ
ಉಡುಪಿ, ಸೆ.21: ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೆಮ್ಮಾನಬೈಲ್‌ನ ಯಕ್ಷಗಾನ ಭಾಗವತ ರಾಮಚಂದ್ರ ಜಿ.ನಾಯ್ಕ (54) ಅವರು ಬುಧವಾರ ನಿಧನರಾದರು.
ಕಳೆದ 32 ವರ್ಷಗಳಿಂದ ವಿವಿಧ ಮೇಳಗಳಲ್ಲಿ ಭಾಗವತರಾಗಿ ಕಲಾಸೇವೆ ಮಾಡಿದ್ದ ರಾಮಚಂದ್ರ ನಾಯ್ಕ್ ಕಳೆದ ವರ್ಷ ಸಿಗಂಧೂರು ಮೇಳದಲ್ಲಿ ಪ್ರಧಾನ ಭಾಗವತರಾಗಿ ಸೇವೆಸಲ್ಲಿಸಿದ್ದರು. ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಕೆ.ಪಿ.ಹೆಗಡೆ, ಸದಾನಂದ ಐತಾಳ್ ಇವರಿಂದ ಭಾಗವತಿಕೆ ತರಬೇತಿ ಪಡೆದಿದ್ದರು.
ಗೋಳಿಗರಡಿ, ರಂಜದಕಟ್ಟೆ ತೀರ್ಥಹಳ್ಳಿ, ಅಮೃತೇಶ್ವರಿ, ಹಾಲಾಡಿ, ಪೆರ್ಡೂರು, ಮಡಾಮಕ್ಕಿ, ಆಜ್ರಿ, ಕುಮಟಾ, ಸಾಲಿಗ್ರಾಮ ಮೇಳಗಳಲ್ಲಿ ಭಾಗವತರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
Next Story