ಫಾತಿಮತ್ ಝಹುರಾ
ಮಂಗಳೂರು, ಸೆ.22: ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ ಅವರ ಪತ್ನಿ, ಪಾಣೆಮಂಗಳೂರು ಸಮೀಪದ ಆಲಡ್ಕ ನಿವಾಸಿ ಫಾತಿಮತ್ ಝಹುರಾ (65) ಗುರುವಾರ ರಾತ್ರಿ ನಿಧನರಾದರು.
ಅಲ್ಪಕಾಲದ ಅಸೌಖ್ಯಕ್ಕೀಡಾಗಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ವೇಳೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಪತಿ, ನಾಲ್ಕು ಮಂದಿ ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story