ಪಾಂಡುರಂಗ ಭಟ್
ಕುಂದಾಪುರ: ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತಿದ್ದ ಕೆನರಾ ಬ್ಯಾಂಕಿನ ನಿವೃತ್ತ ಮ್ಯಾನೇಜರ್, ಹಿರಿಯ ಸಮಾಜ ಸೇವಕ ಕೆ.ಪಾಂಡುರಂಗ ಭಟ್ (81) ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ನಿಧನರಾದರು.
ಉತ್ತಮ ಜನಸೇವಕರಾಗಿದ್ದ ಇವರು ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದಾನಿಯಾಗಿ ಹಲವು ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸುತ್ತಿದ್ದರು. ಕೋಟೇಶ್ವರ ಶ್ರೀಪಟ್ಟಾಭಿರಾಮಚಂದ್ರ ದೇವಸ್ಥಾನದ ಶ್ರೀರಾಮ ಸೇವಾ ಸಂಘದ ಪದಾಧಿಕಾರಿಯಾಗಿ ಸಕ್ರಿಯರಾಗಿದ್ದರು.
ಉತ್ತಮ ಕಲಾವಿದರೂ ಆಗಿದ್ದ ಪಾಂಡುರಂಗ ಭಟ್, ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story