ಗೋಪಾಲ ಆರ್. ಶೇಟ್
ಮಂಗಳೂರು: ಮಂಗಳೂರಿನ ದೈವಜ್ಞ ಬ್ರಾಹ್ಮಣ ಸಮಾಜದ ಹಿರಿಯರು ಹಾಗೂ ಹೋಟೆಲ್ ವಸಮಂತ ಮಹಲ್‌ನ ಮಾಲಕರಾದ ಗೋಪಾಲ ಆರ್. ಶೇಟ್ (84) ಸೋಮವಾರ ರಾತ್ರಿ 8 ಗಂಟೆಗೆ ಕೊಡಿಯಾಲ್ ಬೈಲ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಜಿ. ಆರ್. ಶೇಟ್ ಹೊನ್ನಾವರದ ಶ್ರೀ ಕ್ಷೇತ್ರ ಕರ್ಕಿಯಲ್ಲಿರುವ ದೈವಜ್ಞ ಬ್ರಾಹ್ಮಣ ಮಠದ ಸಂಸ್ಥಾಪಕ ಟ್ರಸ್ಟಿ, ಮಂಗಳೂರಿನ ಶ್ರೀ ಗಾಯತ್ರಿ ದೇವಿ ಸಿದ್ಧಿವಿನಾಯಕ ದೇವಸ್ಥಾನ ಮತ್ತು ಶ್ರೀಲಕ್ಷ್ಮೀ ನಾರಾಯಣ ದೇವಸ್ಥಾನದ ಟ್ರಸ್ಟಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ.
ನಗರದ ಪ್ರಸಿದ್ಧ ಉದ್ಯಮಿಗಳಾಗಿದ್ದ ಇವರು ಪತ್ನಿ ಹಾಗೂ ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು, ಅಪಾರ ಬಂಧು ಮಿತ್ರ - ಸ್ನೇಹಿತರನ್ನು ಅಗಲಿದ್ದಾರೆ.
Next Story