ಕೃಷ್ಣಾಪುರ: ಹಾಜಿರಾ ನಿಧನ
ಮಂಗಳೂರು, ಫೆ.7: ಕೃಷ್ಣಾಪುರ 7ನೆ ಬ್ಲಾಕ್ ನಿವಾಸಿ, ಬದ್ರುಲ್ ಹುದಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ, ಕನ್ನಡನಾಡು ಪಕ್ಷದ ಮುಖಂಡರಾಗಿದ್ದ ಅಬೂಬಕ್ಕರ್ ಅವರ ಪತ್ನಿ ಹಾಜಿರಾ (52) ಬುಧವಾರ ಬೆಳಗ್ಗೆ ಸುರತ್ಕಲ್ ಸಮೀಪದ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ ಹಾಗೂ ಇಬ್ಬರು ಪುತ್ರರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಬುಧವಾರ ಸಂಜೆ ಕೃಷ್ಣಾಪುರ ಈದ್ಗಾ ಜುಮಾ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story