ಇಬ್ರಾಹೀಂ ರಹ್ಮತುಲ್ಲಾ
ಮಂಗಳೂರು: ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಹಿರಾ ಕಾಲೇಜು ಬಳಿಯ ನಿವಾಸಿ ಹಾಜಿ ಹಮ್ಮಬ್ಬ ಅವರ ಪುತ್ರ ಇಬ್ರಾಹೀಂ ರಹ್ಮತುಲ್ಲಾ (52) ಸೋಮವಾರ ಸಂಜೆ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ವಿದೇಶದಲ್ಲಿ ಹಲವು ವರ್ಷಗಳ ಕಾಲ ಉದ್ಯೋಗದಲ್ಲಿದ್ದ ಇಬ್ರಾಹೀಂ ರಹ್ಮತುಲ್ಲಾ ಬಳಿಕ ಗಂಜಿಮಠದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ತಿಂಗಳಿನಿಂದ ಅನಾರೋಗ್ಯದಿಂದಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಅವರ ನಿಧನಕ್ಕೆ ಅನಿವಾಸಿ ಭಾರತೀಯ ಉದ್ಯಮಿ ಉಸ್ಮಾನ್ ಹಂಗ್ಳೂರು ಅವರು ಸಂತಾಪ ಸೂಚಿಸಿದ್ದಾರೆ.
Next Story