ಹಾರೂನ್ ಹಾಜಿ
ಪುತ್ತೂರು: ನರಿಮೊಗರು ಗ್ರಾಮದ ಪುರುಷರಕಟ್ಟೆ ನಿವಾಸಿ ಪುರುಷರಕಟ್ಟೆ ಹಿಮಾಯತ್ತುಲ್ ಇಸ್ಲಾಂ ಮದ್ರಸದ ಸ್ಥಾಪಕಾಧ್ಯಕ್ಷ ಮರೀಲ್ ದಿ.ಮೂಸಾ ಹಾಜಿ ಎಂಬವರ ಪುತ್ರ ಹಾರೂನ್ ಹಾಜಿ (65) ಅಲ್ಪ ಕಾಲದ ಸೌಖ್ಯದಿಂದ ಗುರುವ ಸ್ವಗೃಹದಲ್ಲಿ ನಿಧಾನರಾದರು.
ಮೃತರು ಪುರುಷರಕಟ್ಟೆ ಹಿಮಾಯತ್ತುಲ್ ಇಸ್ಲಾಂ ಮದ್ರಸದಲ್ಲಿ ಸುದೀರ್ಘ 20 ವರ್ಷಕ್ಕಿಂತ ಅಧಿಕ ವರ್ಷ ಅಧ್ಯಕ್ಷರಾಗಿ, ಮುಕ್ವೆ ರೆಹ್ಮನಿಯ ಜುಮಾ ಮಸೀದಿಯ ಕಾರ್ಯದರ್ಶಿ ಮತ್ತು ಮುಕ್ವೆ ದರ್ಗಾ ಶರೀಪ್ ಇದರ ಊರೂಸ್ ಕಮಿಟಿಯ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದರು.
ಪತ್ನಿ, ಪುತ್ರಿ, ಅಳಿಯ, ಸಹೋದರರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
Next Story