ಎಂ ಎಚ್ ಶಾಹುಲ್ ಹಮೀದ್
ಮಂಗಳೂರು: ಜಮಾಅತೆ ಇಸ್ಲಾಮಿ ಹಿಂದ್ ಪಾಣೆಮಂಗಳೂರು ಘಟಕದ ಹಿರಿಯ ಕಾರ್ಯಕರ್ತ ಎಂಎಚ್ ಶಾಹುಲ್ ಹಮೀದ್ (90) ಮಂಗಳವಾರ ಮಧ್ಯಾಹ್ನ ಬೋಳಂಗಡಿಯಲ್ಲಿರುವ ತನ್ನ ಸ್ವ ಗೃಹದಲ್ಲಿ ನಿಧನರಾದರು.
ಪತ್ನಿ, ಪುತ್ರರಾದ ಅಬ್ದುಶುಕೂರ್, ಎಂಎಚ್ ಮುಸ್ತಫಾ ಹಾಗೂ ಆರು ಮಂದಿ ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಮೃತರು ಅಗಲಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ಮೂಲರಪಟ್ನದ ನಿವಾಸಿಯಾಗಿದ್ದ ಇವರು ಹಲವು ವರ್ಷಗಳ ಹಿಂದೆ ಬೋಳಂಗಡಿಯಲ್ಲಿ ಜಿನಸು ಅಂಗಡಿ ವ್ಯಾಪಾರ ಆರಂಭಿಸಿದ್ದರು. ಜಮಾಅತೆ ಇಸ್ಲಾಮಿ ಹಿಂದ್ ಪಾಣೆಮಂಗಳೂರು ಘಟಕದ ಸ್ಥಾಪಕ ಸದಸ್ಯ ರಾಗಿ ಸಂಘಟನಾತ್ಮಕ ಕೆಲಸಗಳಲ್ಲೂ ಗುರುತಿಸಿಕೊಂಡಿದ್ದರು.
ಬೋಳಂಗಡಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಎಲ್ಲರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದ ಇವರು ಸ್ಥಳೀಯವಾಗಿ ‘ಸಾವುಂಞಾಕ’ ಎಂದೇ ಚಿರಪರಿಚಿತರಾಗಿದ್ದರು.
Next Story