ಕೊಣಾಜೆ: ಹರೇಕಳ ಗ್ರಾಮದ ಐಕು ನಿವಾಸಿ ಬೋನವೆಂಚರ್ ಡಿಸೋಜ (87) ಸೋಮವಾರ ಸ್ವಗೃಹದಲ್ಲಿ ಮತ ಚಲಾಯಿಸಿ ನಿಧನರಾದರು. ಇವರಿಗೆ ಮೂವರು ಗಂಡು ಮತ್ತು ಇಬ್ಬರು ಹೆಣ್ಮಕ್ಕಳಿದ್ದಾರೆ.
ಸೋಮವಾರ ಬೆಳಗ್ಗೆಯಷ್ಟೇ ಅವರು ತಮ್ಮ ಮನೆಯಲ್ಲಿ ಮತ ಚಲಾಯಿಸಿ ಮತದಾನದ ಕರ್ತವ್ಯವನ್ನು ನಿಭಾಯಿಸಿದ್ದರು. ಸಂಜೆ ವೇಳೆ ಅಲ್ಪ ಕಾಲದ ಅಸೌಖ್ಯದ ಕಾರಣದಿಂದ ನಿಧನರಾದರು.