ಅಬೂಬಕರ್ ಅಡ್ಕಸ್ಥಳ
ಪೆರ್ಲ: ಎಣ್ಮಕಜೆ ಗ್ರಾಮದ ಅಡ್ಕಸ್ಥಳ ನಿವಾಸಿ ಹಾಗೂ ಅಡ್ಕಸ್ಥಳ ಬದ್ರಿಯಾ ಜುಮಾ ಮಸ್ಜಿದ್ ಜಮಾಅತ್ ಕಮಿಟಿಯ ಮಾಜಿ ಅಧ್ಯಕ್ಷ ಅಬೂಬಕರ್.ಎ (72) ಅಲ್ಪ ಕಾಲದ ಅಸೌಖ್ಯದಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಂಗಳವಾರ ತಡರಾತ್ರಿ ನಿಧನರಾದರು.
ಜಮಾಅತ್ ಕಮಿಟಿಯ ಅಧ್ಯಕ್ಷ , ಕೋಶಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಸ್ಥಳೀಯ ಮಸೀದಿ, ಮದ್ರಸದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದರು. ಐದು ದಶಕಗಳಿಂದ ವ್ಯಾಪಾರಿಯಾಗಿ ಅಡ್ಕಸ್ಥಳದಲ್ಲಿ ದೀನಸಿ ಅಂಗಡಿಯನ್ನು ಹೊಂದಿದ್ದ ಅಬೂಬಕರ್ ಅವರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಬೂಬಕರ್ ಅವರ ನಿಧನಕ್ಕೆ ಜಮಾಅತ್ ಕಮಿಟಿಯ ಅಧ್ಯಕ್ಷ ಸಿಎ ಅಬ್ದುಲ್ಲ ಮಾದುಮೂಲೆ, ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಸಂತಾಪ ವ್ಯಕ್ತಪಡಿಸಿದ್ದಾರೆ.
Next Story