ಮಂಗಳೂರು: ಇಲ್ಲಿನ ಕಂದಾವರ ಗ್ರಾಮ ಬೈಲುಗುಂಡಿತೋಟ ನಿವಾಸಿ, ಪ್ರಗತಿಪರ ಕೃಷಿಕ ತಿಮ್ಮಪ್ಪ ಶೆಟ್ಟಿ (81) ಇವರು ಅಸೌಖ್ಯದಿಂದ ಶನಿವಾರ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರು ಇದ್ದಾರೆ. ಪ್ರಗತಿ ಪರ ಕೃಷಿಕರಾಗಿ, ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಗುರುತಿಸಿಕೊಂಡಿದ್ದರು.