ಗೋವಿಂದ ಪೂಜಾರಿ
ಬ್ರಹ್ಮಾಾವರ: ಹಿರಿಯ ನಾಟಿ ವೈದ್ಯ, ಕೃಷಿಕ ಹಂದಾಡಿ ಗೋವಿಂದ ಪೂಜಾರಿ(82) ಅಲ್ಪಕಾಲದ ಅಸೌಖ್ಯದಿಂದ ಇಂದು ಹಂದಾಡಿಯ ಸ್ವಗೃಹದಲ್ಲಿ ನಿಧನರಾದರು.
ಹಿರಿಯ ಕೃಷಿಕ ಗೋವಿಂದ ಪೂಜಾರಿ ಸ್ತ್ರೀ ಸಂಬಂಧಿತ ಅನಾರೋಗ್ಯ ಸಮಸ್ಯೆೆ ಗಳಿಗೆ ಔಷಧಿ ಕೊಡುತ್ತಿದ್ದರು. ಜಾನುವಾರುಗಳ ಕಾಲುಬಾಯಿ, ಕೆಚ್ಚಲು ಬಾವಿನಂತಹ ಕಾಯಿಲೆಗಳು ಮತ್ತು ಗರ್ಭಧಾರಣೆ ಇತ್ಯಾದಿಗಳಿಗೆ ಸಂಬಂಧಿಸಿ ನಾಟಿ ಔಷಧಿ ಕೊಡುತ್ತಿದ್ದರು. ವಿವಿಧ ಕೃಷಿ ಪ್ರಯೋಗಗಳನ್ನು ನಡೆಸಿ ಇತರ ಕೃಷಿಕರಿಗೆ ಮಾರ್ಗದರ್ಶಿಯಾಗಿದ್ದರು ಮತ್ತು ಪಂಚಾಯತಿದಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಪುತ್ರನಾದ ಉದಯವಾಣಿಯ ಹಿರಿಯ ಉಪಸಂಪಾದಕ ಗಿರೀಶ್ ಎಚ್., ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story